ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: "ಸಾವಯವ ಕೃಷಿ ಆರೋಗ್ಯಕ್ಕೆ ಪೂರಕ, ಸರಕಾರಿ ಸೌಲಭ್ಯ ಪಡೆದು ಮಾದರಿ ಕೃಷಿಕರಾಗಿ"

ಮುಲ್ಕಿ: ಸಾವಯವ ಕೃಷಿ ಆರೋಗ್ಯಕ್ಕೆ ಪೂರಕವಾಗಿದ್ದು, ಕೃಷಿಕರು ಸರಕಾರದ ಸವಲತ್ತು ಪಡೆದು ಮಾದರಿ ಕೃಷಿಕರಾಗಲು ಪ್ರಯತ್ನಿಸಬೇಕೆಂದು ಮುಲ್ಕಿ ನಪಂ ಉಪಾಧ್ಯಕ್ಷ ಸತೀಶ್ ಅಂಚನ್ ಹೇಳಿದರು.

ಅವರು ದಕ್ಷಿಣ ಕನ್ನಡ ಜಿಪಂ ಕೃಷಿ ಇಲಾಖೆ ಮಂಗಳೂರು ತಾಲೂಕು, ಮುಲ್ಕಿ ಹೋಬಳಿ ರೈತ ಸಂಪರ್ಕ ಕೇಂದ್ರ ವತಿಯಿಂದ ಮುಲ್ಕಿ ನಪಂ ವ್ಯಾಪ್ತಿಯ ಮಾನಂಪಾಡಿ ಗ್ರಾಮದಲ್ಲಿ 2020- 21ನೇ ಸಾಲಿನ ಮಣ್ಣು ಆರೋಗ್ಯ ಮಾದರಿ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅತಿಕಾರಿಬೆಟ್ಟು ಗ್ರಾಪಂ ಅಧ್ಯಕ್ಷ ಮನೋಹರ ಕೋಟ್ಯಾನ್ ಮಾತನಾಡಿ, ಗ್ರಾಮೀಣ ಭಾಗದ ಜನತೆ ಕೃಷಿಯನ್ನು ಅವಲಂಬಿಸಿದ್ದು, ತರಬೇತಿ ಮೂಲಕ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದರು.

ಅಧ್ಯಕ್ಷತೆಯನ್ನು ಮುಲ್ಕಿ ನಪಂ ಸದಸ್ಯೆ ವಂದನಾ ಕಾಮತ್ ವಹಿಸಿದ್ದರು. ಮಾನಂಪಾಡಿ ಶಾಲಾ ಮುಖ್ಯೋಪಾಧ್ಯಾಯಿನಿ ಶೋಭಾ ಮತ್ತಿತರರು ಉಪಸ್ಥಿತರಿದ್ದರು.

ಮುಲ್ಕಿ ಹೋಬಳಿಯ ಕೃಷಿ ಅಧಿಕಾರಿ ಅಬ್ದುಲ್ ಬಶೀರ್ ಮಾತನಾಡಿ, ಮುಲ್ಕಿ ಹೋಬಳಿಯಲ್ಲಿ ಮಣ್ಣು ಆರೋಗ್ಯ ಮಾದರಿ ಗ್ರಾಮ ತರಬೇತಿಯನ್ನು ಅತ್ತೂರು, ಪಂಜ, ಮಾನಂಪಾಡಿ, ಕಿಲ್ಪಾಡಿ ಚಿತ್ರಾಪು ಸೇರಿ ಐದು ಮಾದರಿ ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾಗಿದ್ದು, ಕೃಷಿಕರಿಗೆ ಸೂಕ್ತ ತರಬೇತಿ ನೀಡಿ, ಸಾವಯವ ಕೃಷಿಗೆ ಪ್ರೋತ್ಸಾಹ ನೀಡಲಾಗುವುದು ಎಂದರು. ಬಳಿಕ ಕೃಷಿಕರ ಜೊತೆ ಸಂವಾದ ನಡೆಸಿ ತರಬೇತಿ ಶಿಬಿರ ನಡೆಯಿತು. ಕೃಷಿ ಅಧಿಕಾರಿ ಅಬ್ದುಲ್ ಬಶೀರ್ ಸ್ವಾಗತಿಸಿ, ನಿರೂಪಿಸಿದರು.

Edited By : Manjunath H D
Kshetra Samachara

Kshetra Samachara

01/03/2021 01:07 pm

Cinque Terre

9.78 K

Cinque Terre

0

ಸಂಬಂಧಿತ ಸುದ್ದಿ