ಉಡುಪಿ: ಶ್ರೀಕೃಷ್ಣಮಠದ ಪರ್ಯಾಯ ಮಹೋತ್ಸವದ ವಿಶೇಷ ಭೋಜನಕ್ಕೆ ಲಕ್ಷಕ್ಕೂ ಅಧಿಕ ಮೌಲ್ಯದ ಮಟ್ಟುಗುಳ್ಳ ಸಮರ್ಪಣೆಗೊಂಡಿದೆ. ಕೃಷ್ಣಾಪುರ ಮಠದ ಪರ್ಯಾಯೋತ್ಸವ ಕಾಲದ ಸುಗ್ರಾಸ ಭೋಜನಕ್ಕೆ ಸವಿರುಚಿ ನೀಡುವ ಮಟ್ಟುಗುಳ್ಳ, ಮಟ್ಟು ಪ್ರದೇಶದ ಬೆಳೆಗಾರರ ಪರಿಶ್ರಮದ ಸೇವಾ ಬೆಳೆ ಕಾಣಿಕೆ.
ಶ್ರೀ ಕೃಷ್ಣಮಠಕ್ಕೆ ಈ ಬಾರಿ ಮಟ್ಟುಗುಳ್ಳ ಬೆಳೆಗಾರರ ಸಂಘದ ಮೂಲಕ 210 ಬೆಳೆಗಾರರು ಬೆಳೆದ ಮಟ್ಟುಗುಳ್ಳ ಮತ್ತು ಇತರ ಸೇವಾರ್ಥಿಗಳ ಮತ್ತು ಮಠದ ಅನುಯಾಯಿಗಳ ಸಹಕಾರದಿಂದ ಹೊರೆ ಕಾಣಿಕೆ ಮೂಲಕ ಮಠಕ್ಕೆ ಸಮರ್ಪಣೆಯಾಯಿತು. ಭಕ್ತಾದಿಗಳ ಈ ಹೊರೆ ಕಾಣಿಕೆಯನ್ನು ಉಗ್ರಾಣದಲ್ಲಿ ಸಂಗ್ರಹಿಸಿ ಇಡಲಾಗಿದೆ.
Kshetra Samachara
17/01/2022 06:49 pm