ಉಡುಪಿ: ಕರಾವಳಿ ಭಾಗದ ಜನರಿಗೆ ಕೃಷಿ ಎಂಬುದು ಜೀವನದ ಒಂದು ಅವಿಭಾಜ್ಯ ಅಂಗ. ಆದರೆ, ಕೃಷಿ ಉತ್ಪನ್ನ ವ್ಯವಸ್ಥಿತವಾಗಿ ಮಾರಾಟ ಮಾಡುವ ಬಗ್ಗೆ ಹೆಚ್ಚಿನ ಕೃಷಿಕರಿಗೆ ಮಾಹಿತಿ ಇಲ್ಲ.
ಈ ಹಿನ್ನೆಲೆಯಲ್ಲಿ ಕರಾವಳಿ ಇಂಟಿಗ್ರೇಟೆಡ್ ಆಗ್ರೋ ಪ್ರೊಡ್ಯೂಸರ್ ಕಂಪನಿ ಅಸ್ತಿತ್ವಕ್ಕೆ ಬಂದಿದೆ. ಸಮಾನ ಮನಸ್ಕ ಸಾವಯವ ಕೃಷಿಕರು ಈ ಸಂಸ್ಥೆ ಹುಟ್ಟು ಹಾಕಿದ್ದಾರೆ. ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದು, ಕೃಷಿ ತಜ್ಞರಿಂದ ಮಾಹಿತಿ ಒದಗಿಸುವುದು, ಕೃಷಿ ಪದ್ಧತಿಯಲ್ಲಿ ತಂತ್ರಜ್ಞಾನ ಅಳವಡಿಕೆ, ಮಾರುಕಟ್ಟೆ ರಚನೆ, ವಿಸ್ತರಣೆ ಮಾಡುವುದು, ಕೃಷಿ ಉತ್ಪನ್ನ ವ್ಯವಸ್ಥಿತ ರೀತಿ ಕಾಪಾಡುವುದು, ಬಂಜರು ಭೂಮಿ ಸದ್ಬಳಕೆ ಮಾಡುವುದು ಇದರ ಹಿಂದಿರುವ ಉದ್ದೇಶ ಎಂದು ಸಂಸ್ಥೆಯ ಡಾ.ಹರೀಶ್ ಜೋಶಿ ಹೇಳಿದ್ದಾರೆ.
ಈ ಬಗ್ಗೆ ಇಂದು ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಮಾಹಿತಿ ನೀಡಿದ ಅವರು , ಸಾವಯವ ಪದ್ಧತಿಯಲ್ಲಿ ಬೆಳೆದ ಕೃಷಿ ಉತ್ಪನ್ನ ಹಾಗೂ ಬೆಳೆಗೆ ಮಾರುಕಟ್ಟೆ ಒದಗಿಸುವ ಮತ್ತು ಗೊಬ್ಬರ ಪೂರೈಕೆಗೆ ಒತ್ತು ನೀಡುವ ದೃಷ್ಟಿಯಿಂದ ವಾಣಿಜ್ಯ ಮಳಿಗೆಯನ್ನು ಡಿ.18 ರಂದು ಮತ್ತು 23 ರಂದು ತೆರೆಯಲು ಉದ್ದೇಶಿಸಿದ್ದೇವೆ. ಸಾವಯವ ಕೃಷಿಯಲ್ಲಿ ಆಸಕ್ತಿ ಇರುವವರು ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.
Kshetra Samachara
16/12/2020 05:10 pm