ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ರೈತ ಪರ ಬಂದ್ ಗೆ ರಾಸ್ತಾರೋಕೋ ನಡೆಸಿ ಬೆಂಬಲ

ಮಂಗಳೂರು: ರಾಷ್ಟ್ರವ್ಯಾಪಿ ರೈತ ಬಂದ್ ಕರೆ ಹಿನ್ನೆಲೆ ನಗರದ ನಂತೂರು ಜಂಕ್ಷನ್ ನಲ್ಲಿ ವಿವಿಧ ಸಂಘಟನೆ, ರಾಜಕೀಯ ಪಕ್ಷಗಳ ವತಿಯಿಂದ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಯಿತು. ರಸ್ತೆಗಿಳಿದ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದ್ದರ ಪರಿಣಾಮ ರಸ್ತೆ ಸಂಚಾರದಲ್ಲಿ ಸ್ವಲ್ಪ ಮಟ್ಟಿನ ಅಸ್ತವ್ಯಸ್ತ ಕಂಡುಬಂತು.

ಇತ್ತ ಪ್ರತಿಭಟನೆ ಆರಂಭವಾಗುತ್ತಿದ್ದಂತೆ ಪೊಲೀಸರು ನಗರದ ನಾಲ್ಕು ಕಡೆಗಳಿಂದ ನಂತೂರು ಜಂಕ್ಷನ್ ಗೆ ಆಗಮಿಸುವ ರಸ್ತೆ ಸಂಚಾರದಲ್ಲಿ ಬದಲಾವಣೆ ನಡೆಸಿ ಟ್ರಾಫಿಕ್ ದಟ್ಟಣೆ ತಪ್ಪಿಸಿದರು.

ಇನ್ನು ಪ್ರತಿಭಟನಾ ಸಭೆಯನ್ನ ಉದ್ದೇಶಿಸಿ ವಿಧಾನಪರಿಷತ್ ಮಾಜಿ ಸದಸ್ಯ ಐವನ್‌ ಡಿಸೋಜಾ ಮಾತನಾಡಿ, ಕೇಂದ್ರ ಸರಕಾರ ತರಲು ಹೊರಟಿರೋ ನೂತನ ಕಾಯ್ದೆಗಳು ರೈತ ವಿರೋಧಿ ಕಾಯ್ದೆಗಳಾಗಿದ್ದು, ರೈತರ ಪಾಲಿಗೆ ಮರಣ ಶಾಸನಗಳಾಗಿವೆ.

ಇತಿಹಾಸದಲ್ಲಿ ರೈತರಿಗೆ ಕೇಡು ಬಗೆದ ಯಾವ ಸರಕಾರವೂ ಉಳಿದ್ದಿಲ್ಲ. ಆದ್ದರಿಂದ ಇದೊಂದು ಕೇಂದ್ರ ಸರಕಾರ ಕೊನೆ ಗಳಿಗೆ ಅನ್ನೋದು ಸ್ಪಷ್ಟ ಎಂದರು.

ಪ್ರತಿಭಟನೆಯಲ್ಲಿ ಯಾದವ ಶೆಟ್ಟಿ, ಮಾಜಿ ಶಾಸಕ ಮೊಯ್ದಿನ್ ಬಾವಾ, ಸುನಿಲ್ ಕುಮಾರ್ ಬಜಾಲ್, ಮುನೀರ್ ಕಾಟಿಪಳ್ಳ, ವಿದ್ಯಾ ದಿನಕರ್, ಶಬೀರ್ ಹಾಗೂ ಡಿವೈಎಫ್, ಎಫ್ಐಟಿಯು, ಎಸ್ಡಿಪಿಐ, ಜೆಡಿಎಸ್, ಕಾಂಗ್ರೆಸ್, ಕಾಂಗ್ರೆಸ್ ಕಿಸಾನ್ ಘಟಕ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಸೇರಿದಂತೆ ವಿವಿಧ ಸಂಘಟನೆಗಳ ನಾಯಕರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

08/12/2020 12:45 pm

Cinque Terre

9.52 K

Cinque Terre

3

ಸಂಬಂಧಿತ ಸುದ್ದಿ