ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಕ್ಕಾರು: ಯುವಕರಿಂದ ಹಡೀಲು ಬಿದ್ದಿರುವ ಗದ್ದೆ ಸಾಗುವಳಿ; ಶಾಸಕ ಉಮಾನಾಥ್ ಹರ್ಷ

ಮುಲ್ಕಿ: ಕೃಷಿ ಅವನತಿಯತ್ತ ಸಾಗುತ್ತಿರುವ ಈ ಸಂದರ್ಭ ಹಡೀಲು ಬಿದ್ದಿರುವ ಗದ್ದೆಗಳನ್ನು ಸಾಗುವಳಿ ಮಾಡಿ ಇಂದಿನ ಯುವಕರನ್ನು ಕೃಷಿಯತ್ತ ಸೆಳೆದಿರುವುದು ಅಭಿನಂದನಿಯ ಎಂದು ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

ಅವರು ಕಟೀಲು ಬಳಿ ಎಕ್ಕಾರು ಸಿರಿ ಕುರಲ್ ರೈತ ಉತ್ಪಾದಕರ ಸಂಸ್ಥೆ ವತಿಯಿಂದ ಮಧ್ಯ ಗ್ರಾಮದ ಶಂಕರ ಶೆಟ್ಟಿಯವರ ಮನೆ ಮುಂಭಾಗ ಹಡೀಲು ಬಿದ್ದಿರುವ ಸಾಗುವಳಿ ಮಾಡಿದ ಗದ್ದೆಗಳಲ್ಲಿ ತುಡರ್ ಪರ್ಬ ಎಂಬ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ ಸಿರಿ ಕುರಲ್ ಸಂಸ್ಥೆ ಅಧ್ಯಕ್ಷ ಎಕ್ಕಾರು ಸದಾಶಿವ ಶೆಟ್ಟಿ ಮಾತನಾಡಿ, ಈಗಾಗಲೇ ಮಧ್ಯ ಗ್ರಾಮದಲ್ಲಿ ಸುಮಾರು 40 ಎಕ್ರೆ ಹಡೀಲು ಬಿದ್ದಿರುವ ಗದ್ದೆಗಳನ್ನು ಸಿರಿ ಕುರಲ್ ಸಂಸ್ಥೆ ಮೂಲಕ ಸಾಗುವಳಿ ಮಾಡಿದೆ, ಮುಂದಿನ ದಿನಗಳಲ್ಲಿ 100 ಎಕ್ರೆ ಗದ್ದೆಗಳನ್ನು ಸಾಗುವಳಿ ಮಾಡುವ ಆಲೋಚನೆ ಇದೆ. ನಮಗೆ ಯಂತ್ರೋಪಕರಣ ಖರೀದಿಸಲು ಸಹಾಯಧನ ನೀಡಿದ ಮುಂಬಯಿ ಉದ್ಯಮಿ ಕರುಣಾಕರ ಎಂ. ಶೆಟ್ಟಿಯವರಿಗೆ ಅಭಿನಂದನೆ ಸಲ್ಲಿಸಿದರು ಹಾಗೂ ಗ್ರಾಮಸ್ಥರ ಸಹಕಾರ ಅಗತ್ಯ ಎಂದರು. ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ತಾಪಂ ಸದಸ್ಯೆ ವಜ್ರಾಕ್ಷಿ ಪಿ.ಶೆಟ್ಟಿ, ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಈಶ್ವರ ಕಟೀಲು,ಚೇಳೈರು ಗ್ರಾಪಂ ಮಾಜಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಜಯಾನಂದ ಚೇಳೈರು, ಕೃಷಿ ಅಧಿಕಾರಿ ಬಶೀರ್, ಉದ್ಯಮಿ ಭುಜಂಗ ಶೆಟ್ಟಿ ಎಕ್ಕಾರು, ಪ್ರದೀಪ್ ಸುವರ್ಣ ಎಕ್ಕಾರು ಮುಂತಾದವರು ಉಪಸ್ಥಿತರಿದ್ದರು. ನಿತಿನ್ ಶೆಟ್ಟಿ ಎಕ್ಕಾರು ನಿರೂಪಿಸಿದರು.

Edited By : Nagaraj Tulugeri
Kshetra Samachara

Kshetra Samachara

15/11/2020 08:17 am

Cinque Terre

12.53 K

Cinque Terre

1

ಸಂಬಂಧಿತ ಸುದ್ದಿ