ವೇಗವಾಗಿ ಹೈವೆಯಲ್ಲಿ ಬರುತ್ತಿದ್ದ ಪಿಕಪ್‌ವೊಂದು ರಿಕ್ಷಾಗೆ ಢಿಕ್ಕಿ ಹೊಡೆದು, ರಿಕ್ಷಾ ಹಾಗೂ ಟೆಂಪೋ ಮಗುಚಿ ಬಿದ್ದ ಘಟನೆ ಉಡುಪಿ ಜಿಲ್ಲೆಯ ಕೋಟ ನಗರದಲ್ಲಿ ಸಂಭವಿಸಿದೆ.
ಕುಂದಾಪುರ ಕಡೆಯಿಂದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ವೇಗವಾಗಿ ಬರುತ್ತಿದ್ದ ಪಿಕಪ್ ವಾಹನ, ಕೋಟ ಜಂಕ್ಷನ್‌ನಲ್ಲಿ ರಸ್ತೆ ಕ್ರಾಸ್ ಮಾಡುತ್ತಿದ್ದ ರಿಕ್ಷಾಗೆ ಢಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ರಿಕ್ಷಾ ಹಾಗೂ ಟೆಂಪೋ ಮಗುಚಿ ಬಿದ್ದಿದ್ದು, ಮೀನು ತುಂಬುವ ಟಬ್‌ಗಳು ರಸ್ತೆಯಲ್ಲಿ ಬಿದ್ದು ಕೆಲ ಕಾಲ ಸಂಚಾರಕ್ಕೆ ತೊಡಕು ಉಂಟಾಯಿತು. ಘಟನೆಯಲ್ಲಿ ರಿಕ್ಷಾ ಹಾಗೂ ಟೆಂಪೋ ಚಾಲಕನಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪಘಾತದ ತೀವ್ರತೆ ಹೆದ್ದಾರಿ ಪಕ್ಕದ ಕಟ್ಟಡದ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಸ್ಥಳಕ್ಕೆ ಕೋಟ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.
PublicNext
12/10/2022 04:57 pm