ಉಡುಪಿ: ಉಡುಪಿ ನಗರದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಉಡುಪಿ ಮಸೀದಿ ಬಳಿಯ ಯೂನಿಯನ್ ಬ್ಯಾಂಕ್ ಆವರಣಕ್ಕೆ ನುಗ್ಗಿದ ಘಟನೆ ಸಂಭವಿಸಿದೆ.
ಚಾಲಕನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರನ್ನು ತೆಗೆಯುವ ಭರದಲ್ಲಿ ನಿಯಂತ್ರಣ ಕಳೆದುಕೊಂಡು ಏಕಾಏಕಿ ಬ್ಯಾಂಕ್‌ನ ಗೇಟಿಗೆ ಡಿಕ್ಕಿ ಹೊಡೆದು, ಆವರಣದೊಳಗಿನ ಗಾರ್ಡನ್ ಕಟ್ಟೆಯ ಮೇಲೇರಿದ್ದಾನೆ.
ಇದರಿಂದ ಗಾರ್ಡನ್‌ನಲ್ಲಿ ಇರಿಸಿದ್ದ ಹೂ ಗಿಡದ ಕುಂಡಗಳು ಧ್ವಂಸಗೊಂಡಿದ್ದು, ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಇದೇ ವೇಳೆ ಕೆಲಸ ಮುಗಿಸಿ ಹೊರಗೆ ಬರುತ್ತಿದ್ದ, ಬ್ಯಾಂಕ್‌ನ ಉದ್ಯೋಗಿಯೋರ್ವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
Kshetra Samachara
07/10/2022 08:46 am