ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಳ್ಳಾಲದಲ್ಲಿ ಹಿಟ್ & ರನ್ ಕೇಸ್‌; ಅಪ್ರಾಪ್ತ ಚಾಲಕ, ಕಾರು ಪೊಲೀಸರ ವಶಕ್ಕೆ

ಉಳ್ಳಾಲ: ಉಳ್ಳಾಲ ಬೈಲ್ ಎಂಬಲ್ಲಿ ಟ್ರಾಫಿಕ್ ಸಿಬ್ಬಂದಿಯೊಬ್ಬರಿಗೆ ಕಾರು ಡಿಕ್ಕಿ ಹೊಡೆದ ಘಟನೆ ಸಂಬಂಧ ಕಾರು ಮತ್ತು ಅಪ್ರಾಪ್ತ ಚಾಲಕನನ್ನ ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಉಳ್ಳಾಲ ಮುಕ್ಕಚ್ಚೇರಿ ಮೂಲದ 17ರ ಹರೆಯದ ಅಪ್ರಾಪ್ತನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಲೋಕೇಶ್ ನಾಯ್ಕ್ ಅವರು ಎಎಸ್ಐ ಮಂಜುಳಾ ಅವರ ಜೊತೆ ಭಾನುವಾರ ಸಂಜೆ ಉಳ್ಳಾಲ ಬೈಲು ಎಂಬಲ್ಲಿ ಕರ್ತವ್ಯದಲ್ಲಿದ್ದ ವೇಳೆ ಘಟನೆ ನಡೆದಿತ್ತು. ತೊಕ್ಕೊಟ್ಟಿನಿಂದ ಉಳ್ಳಾಲ ಕಡೆಗೆ ಧಾವಿಸುತ್ತಿದ್ದ ಸ್ವಿಪ್ಟ್ ಕಾರನ್ನ ಗಸ್ತಲ್ಲಿದ್ದ ಲೋಕೇಶ್ ಅವರು ತಪಾಸಣೆಗಾಗಿ ಬದಿಗೆ ನಿಲ್ಲಿಸುವಂತೆ ಸೂಚಿಸಿದ್ದರು. ಕಾರನ್ನು ಬದಿಗೆ ನಿಲ್ಲಿಸಲು ಮುಂದಾಗಿದ್ದ ಅಪ್ರಾಪ್ತ ಚಾಲಕ ಏಕಾಏಕಿ ಕಾರನ್ನು ಮುಂದಕ್ಕೆ ಚಲಾಯಿಸಿ ಲೋಕೇಶ್ ಅವರಿಗೆ ಡಿಕ್ಕಿ ಹೊಡೆಸಿ ಪರಾರಿಯಾಗಿದ್ದ. ಕಾರಿನ ಡಿಕ್ಕಿಯ ರಭಸಕ್ಕೆ ರಸ್ತೆಯ ವಿಭಜಕಕ್ಕೆ ಎಸೆಯಲ್ಪಟ್ಟ ಲೋಕೇಶ್ ಅವರು ತಲೆಗೆ ಗಂಭೀರ ಗಾಯಗೊಂಡು ನಗರದ ಎ.ಜೆ ಆಸ್ಪತ್ರೆಯ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹಿಟ್ & ರನ್ ಪ್ರಕರಣ ದಾಖಲಿಸಿದ್ದ ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಘಟನೆಗೆ ಕಾರಣವಾದ ಕಾರನ್ನ ವಶಕ್ಕೆ ಪಡೆದಿದ್ದು, ಪರಾರಿಯಾಗಿದ್ದ ಆರೋಪಿ ಅಪ್ರಾಪ್ತ ಚಾಲಕನನ್ನೂ ವಶಕ್ಕೆ ಪಡೆದಿದ್ದಾರೆ. ಅಪ್ರಾಪ್ತ ಚಾಲಕ ತನ್ನ ತಂದೆಯ ಕಾರನ್ನ ಚಾಲನಾ ಪರವಾನಿಗೆ ಇಲ್ಲದೆ ಚಲಾಯಿಸುತ್ತಿದ್ದ ವೇಳೆ ಟ್ರಾಫಿಕ್ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು, ಈ ಸಂದರ್ಭ ಗಸ್ತಲ್ಲಿದ್ದ ಪೊಲೀಸ್ ಸಿಬ್ಬಂದಿಯನ್ನೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ.

Edited By : Vijay Kumar
Kshetra Samachara

Kshetra Samachara

04/10/2022 12:05 pm

Cinque Terre

6.1 K

Cinque Terre

2

ಸಂಬಂಧಿತ ಸುದ್ದಿ