ಮಲ್ಪೆ: ಮಲ್ಪೆ ಸಮೀಪದ ಹೂಡೆ ಬೀಚ್‌ನಲ್ಲಿ ನಿನ್ನೆ (ಭಾನುವಾರ) ಸಂಜೆ ನೀರಿಗೆ ಇಳಿದಿದ್ದ ಮಣಿಪಾಲದ ಮೂವರು ವಿದ್ಯಾರ್ಥಿಗಳು ನೀರುಪಾಲಾಗಿದ್ದರು. ನಿನ್ನೆ ಇಬ್ಬರ ಮೃತದೇಹ ಪತ್ತೆಯಾಗಿದ್ದು, ಇಂದು ಬೆಳಿಗ್ಗೆ ಮತ್ತೋರ್ವನ ಶವವು ಪತ್ತೆಯಾಗಿದೆ.
ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ಎಂಐಟಿಯ 15 ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳು ಕೂಡೆ ಬೀಚ್‌ನಲ್ಲಿ ವಿಹಾರಕ್ಕೆಂದು ನಿನ್ನೆ ಸಂಜೆ ಬೀಚ್‌ಗೆ ತೆರಳಿದ್ದಾಗ ಮೂವರು ನೀರಿನಲ್ಲಿ ಮುಳುಗಿದ್ದರು. ಈ ಪೈಕಿ ನಿನ್ನೆ ತೀವ್ರ ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಆಗಲೇ ಮೃತಪಟ್ಟಿದ್ದರು.
ಬೆಂಗಳೂರಿನ ಷಣ್ಮುಖ (19), ನಿಶಾಂತ್ (19) ಮತ್ತು ಹೈದರಾಬಾದ್‌ನ ಶ್ರೀಕರ (19) ಮೃತ ವಿದ್ಯಾರ್ಥಿಗಳಾಗಿದ್ದಾರೆ. ಶ್ರೀಕರ ಅವರ ಮೃತದೇಹ ಶೋಧ ನಡೆಸಲು ಹಾಗೂ ಮತ್ತಿಬ್ಬರು ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಸಾಗಿಸಲು ಎಂದಿನಂತೆ ಅಸಪದ್ಭಾಂಧವ ಈಶ್ವರ್ ಮಲ್ಪೆ ಸಕಾಲದಲ್ಲಿ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ. ಮೂವರು ಸಹಪಾಠಿಗಳ ಸಾವಿನಿಂದಾಗಿ ಮಣಿಪಾಲ ಕಾಲೇಜಿನಲ್ಲಿ ಸೂತಕದ ಛಾಯೆ ಆವರಿಸಿದೆ.
PublicNext
26/09/2022 09:53 am