ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಶಂಕಿತ ಉಗ್ರ ಮಾಝ್ ತಂದೆ ಹೃದಯಾಘಾತದಿಂದ ಮೃತ್ಯು

ಮಂಗಳೂರು: ಶಿವಮೊಗ್ಗ ಪೊಲೀಸರಿಂದ ಬಂಧನಕ್ಕೊಳಗಾದ ಶಂಕಿತ ಉಗ್ರ ಮಾಝ್ ತಂದೆ ಹೃದಯಾಘಾತದಲ್ಲಿ ಮೃತಪಟ್ಟಿದ್ದಾರೆ‌. ಹೃದಯಾಘಾತಕ್ಕೊಳಗಾದ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮುನೀರ್ ಅಹ್ಮದ್(52) ಮೃತಪಟ್ಟ ವ್ಯಕ್ತಿ.

ಶಂಕಿತ ಉಗ್ರನೆಂದು ಪುತ್ರ ಮಾಝ್ ನ ಬಂಧನದ ಬಳಿಕ ಮುನೀರ್ ಅಹಮದ್ ಮಾನಸಿಕವಾಗಿ ಕುಗ್ಗಿದ್ದರು. ಪರಿಣಾಮ ಇಂದು ಸಂಜೆ ವೇಳೆ ಅವರಿಗೆ ಹೃದಯಾಘಾತವಾಗಿತ್ತು. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

Edited By : Abhishek Kamoji
Kshetra Samachara

Kshetra Samachara

23/09/2022 07:55 pm

Cinque Terre

6.95 K

Cinque Terre

0

ಸಂಬಂಧಿತ ಸುದ್ದಿ