ಮುಲ್ಕಿ: ಕಿನ್ನಿಗೋಳಿ ಉಲ್ಲಂಜೆ ಕಟೀಲು ಹೆದ್ದಾರಿ ಕಾಫಿ ಕಾಡು ಬಳಿ ಬೈಕ್ ಗೆ ಆಟೋ ಡಿಕ್ಕಿ ಹೊಡೆದು ಪರಾರಿಯಾಗಿದ್ದು ಸವಾರ ಹಾಗೂ ಮೂರು ವರ್ಷದ ಮಗು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.ಗಾಯಗೊಂಡವರನ್ನು ಕಿನ್ನಿಗೋಳಿ ಸಮೀಪದ ನಡುಗೋಡು ಕೊಂಡೆಮೂಲ ನಿವಾಸಿ ರೀತೇಶ್ ಪೂಜಾರಿ (39) ಹಾಗೂ ಮೂರು ವರ್ಷದ ಪ್ರಾಯದ ಮಗು ಎಂದು ಗುರುತಿಸಲಾಗಿದೆ
ಬೈಕ್ ಸವಾರ ಉಲ್ಲಂಜೆ ಕಡೆಯಿಂದ ಕಿನ್ನಿಗೋಳಿ ಕಡೆಗೆ ಬರುತ್ತಿದ್ದು ಕಾಪಿಕಾಡು ಬಳಿ ಏಕಾಏಕಿ ಆಟೋ ಚಾಲಕನ ನಿರ್ಲಕ್ಷ ಚಾಲನೆಯಿಂದ ಬೈಕ್ ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ.
ಈ ಸಂದರ್ಭ ಸವಾರ ರಿತೇಶ್ ಪೂಜಾರಿ ಹಾಗೂ ಮಗು ಬೈಕ್ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿದ್ದು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಡಿಕ್ಕಿ ಹೊಡೆದು ಪರಾರಿಯಾದ ಆಟೋ ಬಗ್ಗೆ ತಿಳಿದು ಬಂದಿದ್ದು ತನಿಖೆ ನಡೆಸುತ್ತಿದ್ದಾರೆ.
Kshetra Samachara
19/09/2022 07:35 pm