ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ಬಾಲಕನನ್ನು ಬಚಾವ್ ಮಾಡಲು ಹೋಗಿ ಡಿವೈಡರ್ ಮೇಲೇರಿದ ಖಾಸಗಿ ಬಸ್ : ವಿದ್ಯಾರ್ಥಿಗೆ ಗಾಯ!

ಕಾಪು: ಬಾಲಕನನ್ನು ಬಚಾವ್ ಮಾಡಲು ಹೋಗಿ, ಖಾಸಗಿ ಬಸ್ಸೊಂದು ರಸ್ತೆಯ ಡಿವೈಡರ್ ಮೇಲೆರಿದ ಘಟನೆ ಉಡುಪಿ ಜಿಲ್ಲೆಯ ಕಟಪಾಡಿಯ ಸರ್ವಿಸ್ ರಸ್ತೆಯಲ್ಲಿ ಸಂಭವಿಸಿದೆ.

ಮಂಗಳೂರಿನಿಂದ ಉಡುಪಿ ಕಡೆಗೆ ಬರುತ್ತಿದ್ದ ಎಪಿಎಂ ಖಾಸಗಿ ಬಸ್, ಕಟಪಾಡಿಯ ಸರ್ವಿಸ್ ರಸ್ತೆಯಲ್ಲಿ ಬರುತ್ತಿತ್ತು. ಇದೇ ವೇಳೆ ವಿದ್ಯಾರ್ಥಿಯೊಬ್ಬ ಸೈಕಲ್ ನಲ್ಲಿ ಶಾಲೆಯಿಂದ ಮನೆಗೆ ಬರುವ ದಾರಿಯಲ್ಲಿ ಸರ್ವಿಸ್ ರಸ್ತೆಯಲ್ಲಿ ಕ್ರಾಸ್ ಮಾಡುತ್ತಿದ್ದ. ಆಗ ಬಾಲಕನನ್ನು ಬಚಾವ್ ಮಾಡುವ ಭರದಲ್ಲಿ ಬಸ್ ರಸ್ತೆ ಪಕ್ಕದ ಡಿವೈಡರ್ ಮೇಲೆರಿದೆ. ಈ ವೇಳೆ ಬಾಲಕನಿಗೆ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಬಸ್ಸಿನ ಗಾಜು ಪುಡಿಯಾಗಿದ್ದು, ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Edited By :
Kshetra Samachara

Kshetra Samachara

17/09/2022 01:27 pm

Cinque Terre

7.35 K

Cinque Terre

1

ಸಂಬಂಧಿತ ಸುದ್ದಿ