ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಳ್ಳಾಲ: ಬ್ಯಾರಿಕೇಡ್‌ಗೆ ಬೈಕ್ ಡಿಕ್ಕಿ ಹೊಡೆದು ರಸ್ತೆಮೇಲೆ ಬಿದ್ದ ಸವಾರನ ಮೇಲೆ ಹರಿದ ಕ್ಯಾಂಟರ್; ಸ್ಥಳದಲ್ಲೆ ದಾರುಣ ಸಾವು

ತೊಕ್ಕೊಟ್ಟು: ಹೆದ್ದಾರಿಯಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್‌ಗೆ ಬೈಕ್‌ ಡಿಕ್ಕಿ ಹೊಡೆದು ರಸ್ತೆಗೆಸೆಯಲ್ಪಟ್ಟ ಸವಾರನ ಮೇಲೆ ಮೀನು ತುಂಬಿದ್ದ ಕ್ಯಾಂಟರ್ ಹರಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ‌ ರಾ.ಹೆ. 66ರ ತೊಕ್ಕೊಟ್ಟು ಬೈಪಾಸ್ ಎಂಬಲ್ಲಿ ನಡೆದಿದೆ.

ಕಾಸರಗೋಡು ಜಿಲ್ಲೆಯ,ಕುಂಬಳೆ ಉಲ್ಲೋಡಿ ನಿವಾಸಿ ನಿತಿನ್ ಮಾನ್ಯ(27) ಮೃತ ಯುವಕ. ನಿತಿನ್ ಟೆಲ್ಕೊ ಸೋಲಾರ್ ಕಂಪನಿಯ ಕಾಸರಗೋಡು ಶಾಖೆಯಲ್ಲಿ ಸೇಲ್ಸ್ ಮ್ಯಾನ್ ಆಗಿದ್ದರಂತೆ. ಅವರಿಂದು ಕೃಷ್ಣ ಪ್ರಸಾದ್ ಎಂಬವರ ಮೋಟಾರ್ ಬೈಕಲ್ಲಿ ಮಂಗಳೂರಿಗೆ ಬಂದು ಕಾಸರಗೋಡಿಗೆ ಹಿಂದಿರುಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.

ನಿತಿನ್ ಬೈಕಲ್ಲಿ ಮಂಗಳೂರಿನಿಂದ‌ ಕುಂಬಳೆಗೆ ವಾಪಸಾಗುತ್ತಿದ್ದ ವೇಳೆ ತೊಕ್ಕೊಟ್ಟು ಸಮೀಪದ ಬೈಪಾಸ್ ಹೆದ್ದಾರಿಯಲ್ಲಿ ವಾಹನಗಳ ವೇಗ ಮಿತಿಗಾಗಿ ಹಾಕಲಾಗಿದ್ದ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದು ರಸ್ತೆಗೆಸೆಯಲ್ಪಟ್ಟಿದ್ದಾರೆ. ಈ ವೇಳೆ ಕೇರಳಕ್ಕೆ ಧಾವಿಸುತ್ತಿದ್ದ ಮೀನು ತುಂಬಿದ ಕ್ಯಾಂಟರ್ ಒಂದು‌ ನಿತಿನ್ ತಲೆ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಕೃಷ್ಣ ಪ್ರಸಾದ್ ಅವರ ಬೈಕನ್ನ ನಿತಿನ್ ಕಳೆದ ಎರಡು ವಾರಗಳಿಂದ ಬಳಸುತ್ತಿದ್ದರಂತೆ. ನಿತಿನ್ ಮಂಗಳೂರಿಗೆ ಬಂದಿದ್ದರ ಬಗ್ಗೆ ಮಾಹಿತಿ ತಿಳಿದಿಲ್ಲ. ಅವರು ತಂದೆ, ತಾಯಿ ಮತ್ತು ಇಬ್ಬರು ಸಹೋದರರನ್ನ ಅಗಲಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಮೃತ ದೇಹವನ್ನ‌ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

Edited By : Abhishek Kamoji
Kshetra Samachara

Kshetra Samachara

16/09/2022 07:10 pm

Cinque Terre

6.23 K

Cinque Terre

0