ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಳ್ಳಾಲ: ಕಮರಿಗೆ ಉರುಳಿದ ಆಟೋ ರಿಕ್ಷಾ; ವೃದ್ಧ ಚಾಲಕ ಸ್ಥಳದಲ್ಲೇ ಸಾವು

ಉಳ್ಳಾಲ: ಆಟೋ ರಿಕ್ಷಾವೊಂದು ನಿಯಂತ್ರಣ ತಪ್ಪಿ ಕಮರಿಗೆ ಉರುಳಿ ಬಿದ್ದ ಪರಿಣಾಮ ವೃದ್ಧ ಆಟೋ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಪಾನೀರು ಎಂಬಲ್ಲಿ ನಿನ್ನೆ ರಾತ್ರಿ ನಡೆದಿದೆ. ಸೋಮನಾಥ ದೇವಸ್ಥಾನದ ಬಳಿಯ ನಿವಾಸಿ ಆನಂದ್ ಸಫಲ್ಯ(70)ಮೃತ ದುರ್ದೈವಿ.

ಸೋಮೇಶ್ವರ ದೇವಸ್ಥಾನದ ಬಳಿಯ ಆಟೋ ಪಾರ್ಕಲ್ಲಿ ರಿಕ್ಷಾ ಚಲಾಯಿಸುತ್ತಿದ್ದ ಆನಂದ್ ಅವರು ನಿನ್ನೆ ರಾತ್ರಿ ಬಾಡಿಗೆಗೆ‌ ತೆರಳಿ ಹಿಂತಿರುಗುತ್ತಿರುವ ವೇಳೆ ಅವಘಡ ನಡೆದಿದೆ.ರಾತ್ರಿ 8.45 ರ ವೇಳೆಗೆ ಪಾನೀರು ಅಸ್ಸಿಸಿ ಶಾಲೆ ಬಳಿ ಆನಂದ್ ಚಲಾಯಿಸುತ್ತಿದ್ದ ಆಟೋ ರಿಕ್ಷಾ ಉರುಳಿ ಕಮರಿಗೆ ಬಿದ್ದಿದೆ. ಆನಂದ್ ಅವರ ತಲೆಗೆ ಆಟೋ ರಿಕ್ಷಾದ ಕಬ್ಬಿಣದ ಸಲಾಕೆಗಳ ಏಟು ತಗುಲಿ ಸಾವು ಸಂಭವಿಸಿರುವುದಾಗಿ ತಿಳಿದು ಬಂದಿದೆ.

ಮೃತ ಆನಂದ್ ಅವರು ಪುರಾಣ ಪ್ರಸಿದ್ಧ ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನದ ಎರಡು ಬ್ರಹ್ಮ ಕಲಶೋತ್ಸವದಲ್ಲಿ ನೀರಿನ ವ್ಯವಸ್ಥೆಯನ್ನ ಅಚ್ಚು ಕಟ್ಟಾಗಿ ನಿರ್ವಹಿಸಿದ್ದರು.ಅವರು ಪತ್ನಿ,ಪುತ್ರ,ಪುತ್ರಿಯನ್ನ ಅಗಲಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Edited By : Abhishek Kamoji
Kshetra Samachara

Kshetra Samachara

13/09/2022 10:08 am

Cinque Terre

5.34 K

Cinque Terre

0

ಸಂಬಂಧಿತ ಸುದ್ದಿ