ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ: ವಳಲಂಬೆಯ ಯುವಕ ಬೋವಿಕಾನದಲ್ಲಿ ಆತ್ಮಹತ್ಯೆ

ಸುಳ್ಯ: ಗುತ್ತಿಗಾರು ಗ್ರಾಮದ ವಳಲಂಬೆ ನಿವಾಸಿ ಜೈಸನ್ ಎಂಬ ಯುವಕ ಭಾನುವಾರ ಕಾಸರಗೋಡು ಸಮೀಪದ ಬೋವಿಕಾನದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಭೋವಿಕಾನದಲ್ಲಿ ರಬ್ಬರ್ ತೋಟವನ್ನು ಲೀಸ್‌ಗೆ ಪಡೆದುಕೊಂಡು ಅಲ್ಲಿಯೇ ದಂಪತಿ ಸಮೇತ ವಾಸಿಸುತ್ತಿದ್ದರೆನ್ನಲಾಗಿದೆ.

ಅವರ ತಂದೆ ಮತ್ತು ತಾಯಿ ವಳಲಂಬೆಯಲ್ಲಿದ್ದಾರೆ. ಮೃತರ ದೇಹವನ್ನು ವಳಲಂಬೆ ತರಲಾಗುತ್ತಿದ್ದು ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮೃತರು ತಂದೆ ಥೋಮಸ್, ತಾಯಿ ಲೀಲಮ್ಮ, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

Edited By : Abhishek Kamoji
Kshetra Samachara

Kshetra Samachara

12/09/2022 09:27 pm

Cinque Terre

11.83 K

Cinque Terre

0

ಸಂಬಂಧಿತ ಸುದ್ದಿ