ಬೈಂದೂರು: ತೋಟದಲ್ಲಿ ಬಿದ್ದ ತೆಂಗಿನ ಕಾಯಿ ಹೆಕ್ಕಲು ಹೋದ ವ್ಯಕ್ತಿ ಪಾಳು ಬಾವಿಗೆ ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ಬೈಂದೂರು ತಾಲೂಕಿನ ಯಡ್ತರೆ ಗ್ರಾಮದಲ್ಲಿ ನಡೆದಿದೆ.
ಯಡ್ತರೆ ಸಮುದಾಯ ಆಸ್ಪತ್ರೆ ಬಳಿಯ ನಿವಾಸಿ 59 ವರ್ಷದ ಅಚ್ಚುತ.ಎಂ ಮೃತ ದುರ್ದೈವಿ. ಇವರು ಬೈಂದೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಟೆಂಡರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರಿಗೆ ಕಣ್ಣು ಸರಿಯಾಗಿ ಕಾಣುತ್ತಿರಲಿಲ್ಲ. ಮನೆಯ ಪಕ್ಕದ ಗುಡ್ಡೆಮನೆ ನಾಗಪ್ಪ ಶೇರುಗಾರ ಎಂಬುವವರ ತೋಟದಲ್ಲಿ ಬಿದ್ದಿದ್ದ ತೆಂಗಿನಕಾಯಿಯನ್ನು ಹೆಕ್ಕಲು ಹೋಗಿದ್ದರು.
ಈ ವೇಳೆ ಪಾಳುಬಿದ್ದ ಬಾವಿಗೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
05/09/2022 06:00 pm