ಕುಂದಾಪುರ: ಖಾಸಗಿ ಬಸ್ ವೊಂದರ ಟಯರ್ ಏಕಾಏಕಿ ಬ್ಲಾಸ್ಟ್ ಆಗಿ ಅನಾಹುತ ತಪ್ಪಿದ ಘಟನೆ ಕುಂದಾಪುರದ ರಾ.ಹೆ. 66ರ ತೆಕ್ಕಟ್ಟೆ ಕೆನರಾ ಬ್ಯಾಂಕ್ ಸಮೀಪ ನಡೆದಿದೆ.
ಬಸ್ ಕಾರ್ಕಳದಿಂದ ಕುಂದಾಪುರದ ಕಡೆಗೆ ಸಂಚರಿಸುತ್ತಿತ್ತು.ಖಾಸಗಿ ಬಸ್ ನ ಮುಂಭಾಗದ ಟಯರ್ ಏಕಾಏಕಿ ಬ್ಲಾಸ್ಟ್ ಆಗಿ ರಸ್ತೆ ವಿಭಜಕವನ್ನು ಏರುವ ಸಾಧ್ಯತೆ ಹೆಚ್ಚಾಗಿದ್ದು, ಈ ಸಂದರ್ಭದಲ್ಲಿ ಚಾಲಕನ ಸಮಯ ಪ್ರಜ್ಞೆಯಿಂದಾಗಿ ಭಾರೀ ಅನಾಹುತ ತಪ್ಪಿದೆ.
Kshetra Samachara
29/08/2022 10:29 am