ಉಳ್ಳಾಲ: ರಾ.ಹೆ.66 ರ ಉಚ್ಚಿಲ ಸಂಕೋಳಿಗೆ ಎಂಬಲ್ಲಿ ಕಾರು ಡಿಕ್ಕಿ ಹೊಡೆದ ರಭಸಕ್ಕೆ ರಸ್ತೆ ದಾಟುತ್ತಿದ್ದ ಪಾದಾಚಾರಿಯೋರ್ವರು ಸ್ಥಳದಲ್ಲೇ ಸಾವನ್ನಪಿದ್ದ ಘಟನೆ ಇಂದು ಸಂಜೆ ನಡೆದಿದೆ.
ಉಚ್ಚಿಲ,ಅಕ್ಕರೆ ನಿವಾಸಿ ಶ್ರೀನಿವಾಸ ಆಚಾರ್ಯ(51)ಮೃತ ದುರ್ದೈವಿ.ಶ್ರೀನಿವಾಸ ಅವರು ಸಂಕೋಳಿಗೆ ಎಂಬಲ್ಲಿ ರಸ್ತೆ ದಾಟುತ್ತಿದ್ದ ವೇಳೆ ತಲಪಾಡಿ ಕಡೆಗೆ ಧಾವಿಸುತ್ತಿದ್ದ ಕಾರು ಢಿಕ್ಕಿ ಹೊಡೆದಿದ್ದು ಬಳಿಕ ಎದುರಲ್ಲಿ ಚಲಿಸುತ್ತಿದ್ದ ಲಾರಿಗೆ ಢಿಕ್ಕಿ ಹೊಡೆದು ನಜ್ಜು ಗುಜ್ಜಾಗಿದೆ.ಅಪಘಾತದ ರಭಸಕ್ಕೆ ಶ್ರೀನಿವಾಸ್ ಅವರು ಸ್ಥಳದಲ್ಲೇ ಅಸು ನೀಗಿದ್ದಾರೆ.
ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಕಾರು ಮತ್ತು ಲಾರಿ ಚಾಲಕನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕಾರ್ಪೆಂಟರ್ ಉದ್ಯೋಗಿಯಾಗಿದ್ದ ಮೃತ ಶ್ರೀನಿವಾಸ್ ಅವರು ಪತ್ನಿ ಇಬ್ಬರು ಮಕ್ಕಳನ್ನ ಅಗಲಿದ್ದಾರೆ.
Kshetra Samachara
24/08/2022 10:38 pm