ಸುಳ್ಯ: ಕಾವು ಬುಶ್ರಾ ಸ್ಕೂಲ್ ಬಳಿ ಸುಳ್ಯ ವೃತ್ತ ನಿರೀಕ್ಷಕರು ಸಂಚರಿಸುತ್ತಿದ್ದ ಕಾರು ಮತ್ತು ಓಮ್ನಿ ಕಾರೊಂದರ ನಡುವೆ ಶನಿವಾರ ಬೆಳಗ್ಗೆ ಅಪಘಾತ ಸಂಭವಿಸಿದೆ. ಎರಡು ಕಾರುಗಳಲ್ಲಿದ್ದವರು ಯಾವುದೇ ಅಪಾಯಗಳಿಲ್ಲದೆ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಪುತ್ತೂರು ಕಡೆಯಿಂದ ಸುಳ್ಯದತ್ತ ತೆರಳುತ್ತಿದ್ದ ಸುಳ್ಯ ಸರ್ಕಲ್ ಇನ್‌ಸ್ಪೆಕ್ಟರ್ ನವೀನ್ ಚಂದ್ರ ಜೋಗಿ ಅವರು ಕಾರು ಮತ್ತು ಪೈಚಾರಿನಿಂದ ಮಾಡಾವಿನತ್ತ ಚಲಿಸುತ್ತಿದ್ದ ಮಾಡಾವಿನ ರಬ್ಬರ್ ಅಂಗಡಿ ಮಾಲೀಕ ಹನೀಫ್ ಎಂಬುವರು ಓಮ್ನಿ ಕಾರು ಮಧ್ಯೆ ಈ ಅಪಘಾತ ಸಂಭವಿಸಿದೆ. ಡಿಕ್ಕಿಯಾದ ರಭಸಕ್ಕೆ ಕಾರು ಜಖಂಗೊಂಡಿದೆ. ಹನೀಫ್ ಅವರ ಕಾಲಿಗೆ ಸಣ್ಣ ಪ್ರಮಾಣದ ಗಾಯವಾಗಿದೆ. ಸ್ಥಳಕ್ಕೆ ಸಂಪ್ಯ ಠಾಣೆಯ ಪೊಲೀಸರು ಆಗಮಿಸಿ ಪರಿಶೀಲಿಸುತ್ತಿದ್ದಾರೆ.
Kshetra Samachara
13/08/2022 04:01 pm