ಬೈಂದೂರು: ತಾಲೂಕಿನ ಕಾಲ್ತೋಡಿನಲ್ಲಿ ನಿರುಪಾಲಾಗಿದ್ದ ಬಾಲಕಿ ಸನ್ನಿಧಿ ಮೃತದೇಹ ಇಂದು ಸಂಜೆ ಪತ್ತೆಯಾಗಿದೆ.ಕಳೆದ ಎರಡು ದಿನಗಳಿಂದ ಬಾಲಕಿಗಾಗಿ ತೀವ್ರ ಹುಡುಕಾಟ ನಡೆದಿತ್ತು.ಅಗ್ನಿಶಾಮಕ ದಳ ,ಮೀನುಗಾರರು ಮತ್ತು ಸ್ಥಳೀಯರು ಬಾಲಕಿಗಾಗಿ ಮೊನ್ನೆಯಿಂದ ಹುಡುಕಾಟ ನಡೆಸುತ್ತಿದ್ದರು.ಇದೀಗ ಬಾಲಕಿ ಸೇತುವೆಯಿಂದ ಕಾಲು ಜಾರಿ ಬಿದ್ದ ಸ್ಥಳದಲ್ಲೇ ಮೃತದೇಹ ಪತ್ತೆಯಾಗಿದೆ.
PublicNext
10/08/2022 05:45 pm