ಎಕ್ಕಾರು: ಆಟೋ ರಿಕ್ಷಾಕ್ಕೆ ಟಿಪ್ಪರೊಂದು ಡಿಕ್ಕಿ ಹೊಡೆದ ಪರಿಣಾಮ ಆಟೋ ರಿಕ್ಷಾ ಜಖಂಗೊಂಡ ಘಟನೆ ಕಟೀಲು-ಬಜಪೆ ರಾಜ್ಯ ಹೆದ್ದಾರಿಯ ಎಕ್ಕಾರಿನಲ್ಲಿ ಸಂಜೆ ಸಂಭವಿಸಿದೆ.
ಟಿಪ್ಪರ್ ಡಿಕ್ಕಿ ಹೊಡೆದ ರಭಸಕ್ಕೆ ಆಟೋ ರಿಕ್ಷಾ ರಸ್ತೆಯಂಚಿನಿಂದ ಸರಿದು ಸಮೀಪದಲ್ಲಿಯೇ ನಿಲ್ಲಿಸಲಾಗಿದ್ದ ಆಟೋ ರಿಕ್ಷಾ ಹಾಗೂ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ.
ಘಟನೆಯಲ್ಲಿ 2 ಆಟೋ ಹಾಗೂ ಸ್ಕೂಟರ್ ಗೆ ಹಾನಿಯಾಗಿದೆ. ಘಟನೆ ನಡೆದ ಸಂದರ್ಭ ಚಾಲಕ ಆಟೋದಲ್ಲಿಯೇ ಕುಳಿತಿದ್ದು, ಅಪಾಯದಿಂದ ಪಾರಾಗಿದ್ದಾರೆ.ಅಲ್ಲದೆ ಸಮೀಪವೇ ಮರ ಕೂಡ ಇದ್ದು,ಮರಕ್ಕೆ ತಾಗಿಕೊಂಡು ಆಟೋ ನಿಂತು ಭಾರೀ ಅನಾಹುತ ವೊಂದು ತಪ್ಪಿದೆ.
ಅಪಘಾತದ ದೃಶ್ಯಾವಳಿಯು ಸಮೀಪದ ಅಂಗಡಿಯೊಂದರಲ್ಲಿ ಆಳವಡಿಸಲಾಗಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಟಿಪ್ಪರ್ ಚಾಲಕನ ಅತೀ ವೇಗದ ಚಾಲನೆ ಹಾಗೂ ಅಜಾಗರೂಕತೆಯ ಚಾಲನೆಯಿಂದ ಈ ಘಟನೆ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
Kshetra Samachara
05/08/2022 10:13 pm