ಕಾರ್ಕಳ: ತಾಲೂಕಿನ ಸೂಡ ಗ್ರಾಮದ ಜಲ್ಲಿ ಕ್ರಶರ್ ಘಟಕದಲ್ಲಿ ಟಿಪ್ಪರ್ ಲಾರಿಯೊಂದು ಕಲ್ಲು ಅನ್‌ಲೋಡ್ ಮಾಡುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಆಳವಾದ ಕಂದಕ್ಕೆ ಉರುಳಿಬಿದ್ದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತ ಚಾಲಕನನ್ನು ಬೆಳ್ತಂಗಡಿ ತಾಲೂಕಿನ ಮೊಹಮ್ಮದ್ ಆಸಿಫ್ ಎಂದು ಗುರುತಿಸಲಾಗಿದೆ. ಸೂಡ ಗ್ರಾಮದ ಕ್ರಶರ್ ಒಂದರಲ್ಲಿ ಮೊಹಮ್ಮದ್ ಆಸಿಫ್ ಟಿಪ್ಪರ್ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಮಂಗಳವಾರ ಸಂಜೆ ಸುಮಾರು 6 ಗಂಟೆಗೆ ಕಲ್ಲುಗಳನ್ನು ತುಂಬಿಸಿಕೊಂಡು ಜಲ್ಲಿ ಕ್ರಶರ್‌ಗೆ ಅನ್‌ಲೋಡ್ ಮಾಡುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಚಾಲಕ ಮೊಹಮ್ಮದ್ ಆಸಿಫ್ ಕಲ್ಲು ಅನ್‌ಲೋಡ್ ಮಾಡಲು ಲಾರಿಯನ್ನು ರಿವರ್ಸ್ ತೆಗೆಯುತ್ತಿದ್ದ ವೇಳೆ ಲಾರಿ ಹಿಮ್ಮುಖವಾಗಿ ಚಲಿಸಿ ಆಳವಾದ ಕಂದಕಕ್ಕೆ ಉರುಳಿಬಿದ್ದಿದೆ. ಕಲ್ಲು ಸಹಿತ ಉರುಳಿಬಿದ್ದ ಲಾರಿಯಲ್ಲಿದ್ದ ಚಾಲಕ ಮೊಹಮ್ಮದ್ ಆಸಿಫ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
03/08/2022 08:40 am