ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ದೀಪ ಹಚ್ಚುತ್ತಿದ್ದ ವೇಳೆ ಬೆಂಕಿ ತಗುಲಿ ವೃದ್ಧೆ ಸಾವು

ಉಡುಪಿ: ದೀಪ ಹಚ್ಚುತ್ತಿದ್ದ ವೇಳೆ ಬೆಂಕಿ ತಗಲಿ ವೃದ್ದೆಯೊಬ್ಬರು ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಅಂಬಲಪಾಡಿಯ ರುಕ್ಮಿಣಿ (80) ಸಾವನ್ನಪ್ಪಿದವರು. ರುಕ್ಮಿಣಿ ಅವರು ದೇವರ ಕೋಣೆಯಲ್ಲಿ ದೀಪ ಹಚ್ಚಿ ಅಗರಬತ್ತಿ ತೆಗೆಯಲೆಂದು ಬಗ್ಗಿದಾಗ ಅವರು ಉಟ್ಟಿದ್ದ ನೈಲಾನ್ ಸೀರೆಗೆ ದೀಪದ ಬೆಂಕಿ ತಗಲಿ ಮೈಗೆ ಬೆಂಕಿ ಹತ್ತಿಕೊಂಡಿತ್ತು. ಕೂಡಲೇ ಚಿಕಿತ್ಸೆಗಾಗಿ ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : PublicNext Desk
Kshetra Samachara

Kshetra Samachara

01/08/2022 04:39 pm

Cinque Terre

4.66 K

Cinque Terre

0