ಉಡುಪಿ: ಉಡುಪಿಯಲ್ಲಿ ವಿದ್ಯಾರ್ಥಿನಿಯೊಬ್ಬಳು ಖಾಸಗಿ ಬಸ್ ನಿಂದ ಬಿದ್ದಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಅತೀ ವೇಗದಿಂದ ತೆರಳುತ್ತಿದ್ದ ಬಸ್ ಒಮ್ಮೆಲೇ ತಿರುವು ಪಡೆದ ಸಂದರ್ಭ ವಿದ್ಯಾರ್ಥಿನಿ ಬಸ್‌ನಿಂದ ಹೊರ ಬಿದ್ದು ಗಾಯಗೊಂಡಿದ್ದಾರೆ.
ಇವರು ಬ್ರಹ್ಮಗಿರಿಯಲ್ಲಿ ಬಸ್ ಹತ್ತಿ ಮಣಿಪಾಲ ಕಡೆ ಹೋಗುತ್ತಿದ್ದರು. ಕಿದಿಯೂರು ಹೊಟೇಲ್‌ನ ಮುಂಭಾಗ ತಲುಪುವಾಗ ಬಸ್‌ನ ಚಾಲಕ ಬಸ್ಸನ್ನು ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ ವಿದ್ಯಾರ್ಥಿನಿ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದ್ದಾರೆ. ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Kshetra Samachara
27/07/2022 12:26 pm