ಮಣಿಪಾಲ:ಇಲ್ಲಿಗೆ ಸಮೀಪದ ಶ್ರೀನಿವಾಸ ನಗರ ಬಳಿ ಬ್ರಿಡ್ಜ್ ಕೆಳಗಡೆ ರೈಲು ಡಿಕ್ಕಿ ಹೊಡೆದು ಕಾರ್ಮಿಕ ಮೃತಪಟ್ಟ ಘಟನೆ ಸಂಭವಿಸಿದೆ.
ಕುಂಜಿಬೆಟ್ಟು ಸಗ್ರಿ ಬಾಡಿಗೆ ಮನೆ ನಿವಾಸಿ ಭೀಮಪ್ಪ (31) ಮೃತ ಯುವಕ. ಇವರು ಕಾಂಕ್ರೀಟ್ ಸ್ಲ್ಯಾಬ್ ಹಾಕುವ ಕೆಲಸ ಮಾಡಿಕೊಂಡಿದ್ದು, ಮನೆಯಿಂದ ಕೆಲಸಕ್ಕೆಂದು ಉಡುಪಿಗೆ ಹೋಗಿದ್ದರು. ಮನೆಗೆ ಬರಲು ಹತ್ತಿರವಾಗುತ್ತದೆ ಎಂಬ ಉದ್ದೇಶದಿಂದ ಯಾವಾಗಲು ಬ್ರಿಡ್ಜ್ ದಾರಿಯಾಗಿ ರೈಲ್ವೇ ಹಳಿಯ ಬಳಿ ನಡೆದುಕೊಂಡು ಬರುತ್ತಿದ್ದರು.ಈ ವೇಳೆ ರೈಲು ಢಿಕ್ಕಿಯಾಗಿದೆ.ಮಣಿಪಾಲ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
22/07/2022 10:43 am