ಮಲ್ಪೆ: ತಡರಾತ್ರಿ ಮಲ್ಪೆಯಲ್ಲಿ ಬೈಕ್ ಒಂದು ಸ್ಕಿಡ್ ಆಗಿ ಸವಾರನ ತಲೆಗೆ ಗಂಭೀರ ಗಾಯವಾದ ಘಟನೆ ಸಂಭವಿಸಿದೆ. ತೊಟ್ಟಂ ನಿವಾಸಿ ದೇವದಾಸ್ (47)ಗಾಯಗೊಂಡ ಸವಾರ.
ದೇವದಾಸ್ ವಡಬಾಂಡೇಶ್ವರ ಸರ್ಕಲ್ ಬಳಿ ಹೋಗುತ್ತಿದ್ದಾಗ ಬೈಕ್ ಸ್ಕಿಡ್ ಆಗಿ ರಸ್ತೆಗೆ ಬಿದ್ದಿದ್ದಾರೆ.ಈ ವೇಳೆ ನೈಟ್ ಬೀಟ್ ನಲ್ಲಿದ್ದ ಮಲ್ಪೆ ಪೊಲೀಸ್ ಠಾಣೆಯ ಪೊಲೀಸ್ ಶಿವ ನಾಯ್ಕ್ ತಕ್ಷಣ ಈಶ್ವರ್ ಮಲ್ಪೆಗೆ ಫೋನ್ ಮಾಡಿದರು.ತಕ್ಷಣ ಸ್ಪಂದಿಸಿದ ಈಶ್ವರ್ ಮಲ್ಪೆ ಗಾಯಾಳು ಸವಾರನನ್ನು ಉಡುಪಿಯ ಜಿಲ್ಲಾಸ್ಪತ್ರೆಗೆ ಸೇರಿಸಿದರು.
ಸದ್ಯ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದರೂ ಅವರ ತಲೆಗೆ ಗಂಭೀರ ಗಾಯಗಳಾಗಿವೆ. ಈ ಕುರಿತು ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Kshetra Samachara
20/07/2022 08:23 am