ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಂಬೆ: ಬ್ರೇಕ್‌ ಹಾಕಿದ್ದಕ್ಕೆ ಜಗಳಕ್ಕೆ ನಿಂತ ಬೈಕ್‌ ಸವಾರ!; ಸರಕಾರಿ ಅಧಿಕಾರಿಗಳ ಮೇಲೆ ಹಲ್ಲೆ ಯತ್ನ

ಮಂಗಳೂರು: ಕ್ಷುಲ್ಲಕ ಕಾರಣಕ್ಕಾಗಿ ದ್ವಿಚಕ್ರ ವಾಹನ ಸವಾರನೋರ್ವ ಸರಕಾರಿ ವಾಹನವೊಂದರ ಮಿರರ್ ಪುಡಿ ಮಾಡಿ ಕಾರಿನಲ್ಲಿದ್ದ ಅಧಿಕಾರಿಗಳ ಮೇಲೆ ಹಲ್ಲೆಗೆ ಮುಂದಾಗಿ ಅವಾಚ್ಯ ಶಬ್ದಗಳಿಂದ ಬೈದಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ತುಂಬೆ ಎಂಬಲ್ಲಿ ನಡೆದಿದೆ.

ಮಂಗಳೂರು ಜಿಲ್ಲಾ ಪಂಚಾಯತ್ ಕಚೇರಿಯ ವಾಹನ ಚಾಲಕ ದೇವದಾಸ್ ಎಂಬವರು ಜಿಲ್ಲಾ ಪಂಚಾಯತ್ ಇಲಾಖೆಯ ಅಧಿಕಾರಿಗಳನ್ನು ಮಂಗಳೂರಿನಿಂದ ಪುತ್ತೂರಿಗೆ ಸಭೆಗೆಂದು ಕಾರಿನಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ತುಂಬೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಎದುರಿನಲ್ಲಿ ಹೋಗುತ್ತಿದ್ದ ವಾಹನ ಸವಾರನೋರ್ವ ಬ್ರೇಕ್ ಹಾಕಿದ್ದಾರೆ ಎಂಬ ಕಾರಣಕ್ಕೆ ಜಿ.ಪಂ.ಇಲಾಖೆಯ ವಾಹನ ಚಾಲಕ ಜಗದೀಶ್ ಕೂಡ ಬ್ರೇಕ್ ಹಾಕಿದ್ದಾರೆ.

ದ್ವಿಚಕ್ರ ವಾಹನದಲ್ಲಿ ವೇಗವಾಗಿ ಬರುತ್ತಿದ್ದ ಯುವಕ, ಕಾರಿನ ಹಿಂಬದಿಯಲ್ಲಿದ್ದು ಆತ ಕೂಡ ಬ್ರೇಕ್ ಹಾಕಿದಾಗ ನಿಯಂತ್ರಣ ಕಳೆದುಕೊಂಡು ಸ್ಕಿಡ್ ಆಗಿ ರಸ್ತೆಗೆ ಬಿದ್ದಿದ್ದಾನೆ. ಈ ಕಾರಣಕ್ಕಾಗಿ ಆತ ಕಾರಿಗೆ ದ್ವಿಚಕ್ರ ವಾಹನವನ್ನು ಅಡ್ಡ ಇಟ್ಟು ತಡೆಯೊಡ್ಡಿದ ಬಳಿಕ ಕಾರಿನ ಮಿರರ್‌ ಅನ್ನು ಪುಡಿ ಮಾಡಿ ಚಾಲಕನ ಸಹಿತ ಕಾರಿನಲ್ಲಿದ್ದ ಅಧಿಕಾರಿಗಳಿಗೆ ನಿಂದಿಸಿದ್ದಾನೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Shivu K
Kshetra Samachara

Kshetra Samachara

16/07/2022 04:39 pm

Cinque Terre

13.73 K

Cinque Terre

3

ಸಂಬಂಧಿತ ಸುದ್ದಿ