ಮುಲ್ಕಿ: ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿಯ ಕುಬೆವೂರು ಜಂಕ್ಷನ್ ಬೈಕ್ ಜೊತೆ ಅಪಘಾತ ತಪ್ಪಿಸಲು ಯತ್ನಿಸಿದ ಆಟೋ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು ಮಕ್ಕಳು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗಾಯಗೊಂಡ ಮಕ್ಕಳನ್ನು ದೈವಿಕ್ (9), ಸನ (9), ಆಟೋ ಚಾಲಕ ಪಕ್ಷಿಕೆರೆ ಕಾಫಿಕಾಡು ನಿವಾಸಿ ವಿಶ್ವನಾಥ (42)ಎಂದು ಗುರುತಿಸಲಾಗಿದ್ದು ಉಳಿದ ಮಕ್ಕಳು ಅಲ್ಪ ಸ್ವಲ್ಪ ಗಾಯಗಳೊಂದಿಗೆ ಪವಾಡ ಸದೃಶ ಪಾರಾಗಿದ್ದಾರೆ. ತೋಕೂರು, ಪಕ್ಷಿಕೆರೆ ಪರಿಸರದಿಂದ ಮುಲ್ಕಿ ಮಹರ್ಷಿ ಶಾಲೆಗೆ ಮಕ್ಕಳನ್ನು ಕರೆದುಕೊಂಡು ಬರುತ್ತಿದ್ದ ಆಟೋ ರಾಜ್ಯ ಹೆದ್ದಾರಿ ರೈಲ್ವೆ ಸ್ಟೇಷನ್‌ಗೆ ಹೋಗುವ ಕುಬೆವೂರು ಜಂಕ್ಷನ್ ಬಳಿ ಏಕಾಏಕಿ ಒಳಗಿನಿಂದ ಬಂದ ಬೈಕ್ ಸವಾರನ ಜೊತೆ ಅಪಘಾತ ತಪ್ಪಿಸಲು ಆಟೋ ಚಾಲಕ ವಿಶ್ವನಾಥ ಯತ್ನಿಸಿದ್ದು ಆಟೋ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ಸಂದರ್ಭ ಕೂಡಲೇ ಸ್ಥಳೀಯರು ಧಾವಿಸಿ ಆಟೋದ ಒಳಗಡೆ ಸಿಲುಕಿದ್ದ ಮಕ್ಕಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆಟೋದಲ್ಲಿ ಕೆಲ ಮಕ್ಕಳಿದ್ದು ಪವಾಡ ಸದೃಶ ಪರಾಗಿದ್ದಾರೆ. ಸ್ಥಳಕ್ಕೆ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
Kshetra Samachara
15/07/2022 11:21 am