ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಭಾರೀ ಮಳೆ ಗಾಳಿಗೆ ತಗಡಿನ ಸೀಟು ಹಾರಿ ಕಾರುಗಳಿಗೆ ಹಾನಿ

ಮಂಗಳೂರು: ಭಾರೀ ಗಾಳಿಗೆ ಹೊಟೇಲ್ ವೊಂದರ ಕಬ್ಬಿಣದ ಛಾವಣಿ ಕುಸಿದು ತಗಡಿನ ಸೀಟು ಹಾರಿ ಆರು ಕಾರುಗಳಿಗೆ ಹಾನಿಯಾದ ಘಟನೆ ಮಂಗಳೂರಲ್ಲಿ ನಡೆದಿದೆ. ಇಂದು ಮಧ್ಯಾಹ್ನ ಮಳೆಯೊಂದಿಗೆ ಬೀಸಿದ ಬಿರುಗಾಳಿಗೆ ಮಂಗಳೂರು ನಗರದ ಕೆ.ಎಸ್.ರಾವ್ ರಸ್ತೆಯಲ್ಲಿರುವ ಗಣೇಶ್ ಮಹಲ್ ಹೋಟೆಲ್‌ನ ಪಾರ್ಕಿಂಗ್ ಜಾಗದ ಎದುರಿನ ತಗಡಿನ ಸೀಟು ಬಿದ್ದು ಕಾರುಗಳಿಗೆ ಹಾನಿಯಾಗಿದೆ. ಭಾರೀ ಗಾಳಿಯೊಂದಿಗೆ ಸುರಿದ ಮಳೆಗೆ ಸೀಟು ಹಾರಿ ಬಿದ್ದಿದೆ. ಅಲ್ಲಿ ನಿಲ್ಲಿಸಿದ್ದ ಆರು ಕಾರುಗಳಿಗೆ ಹಾನಿಯಾಗಿದೆ. ಅದೃಷ್ಟವಶಾತ್ ಘಟನೆಯಿಂದ ಯಾವುದೇ ಪ್ರಾಣಹಾನಿಯಾಗಿಲ್ಲ.

Edited By : Somashekar
Kshetra Samachara

Kshetra Samachara

14/07/2022 04:10 pm

Cinque Terre

9.88 K

Cinque Terre

0

ಸಂಬಂಧಿತ ಸುದ್ದಿ