ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಡುಪಣಂಬೂರು: ಸರಣಿ ಅಪಘಾತ

ಮುಲ್ಕಿ :ರಾಷ್ಟ್ರೀಯ ಹೆದ್ದಾರಿ 66ರ ಪಡುಪಣಂಬೂರು ಜಂಕ್ಷನ್ ಬಳಿ ಎರಡು ತಡೆರಹಿತ ಹಾಗೂ ಲಾರಿಯ ನಡುವೆ ಸರಣಿ ಅಪಘಾತ ನಡೆದಿದ್ದು ಪ್ರಯಾಣಿಕರು ಅಲ್ಪ ಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ.

ಮಂಗಳೂರಿನಿಂದ ಉಡುಪಿಯತ್ತ ಸಂಚರಿಸುತ್ತಿದ್ದ ತಡೆರಹಿತ ಬಸ್ಸು ರಾಷ್ಟ್ರೀಯ ಹೆದ್ದಾರಿ ಪಡುಪಣಂಬೂರು ಜಂಕ್ಷನ್ ತಲುಪುತ್ತಿದ್ದಂತೆ ಎದುರಿನಲ್ಲಿ ವಾಹನದ ಜೊತೆಗಿನ ಅಪಘಾತವನ್ನು ತಪ್ಪಿಸಲು ಬಸ್ಸಿನ ಚಾಲಕ ಹಠಾತ್ತನೆ ಬ್ರೇಕ್ ಹಾಕಿದ್ದರಿಂದ ಹಿಂದೆ ಇದ್ದ ಗೂಡ್ಸ್ ತುಂಬಿದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಬಸ್ಸಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ.

ಈ ಸಂದರ್ಭ ಲಾರಿಯ ಹಿಂದೆ ಇದ್ದ ಮತ್ತೊಂದು ತಡೆರಹಿತ ಬಸ್ಸು ಲಾರಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿದೆ. ಅಪಘಾತದಿಂದ ಕೆಲ ಹೊತ್ತು ಹೆದ್ದಾರಿ ಸಂಚಾರ ವ್ಯತ್ಯಯವಾಗಿದ್ದು ಕೂಡಲೇ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೂರು ವಾಹನಗಳನ್ನು ಸ್ಥಳದಿಂದ ತೆರವುಗೊಳಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

13/07/2022 07:17 pm

Cinque Terre

9.41 K

Cinque Terre

0

ಸಂಬಂಧಿತ ಸುದ್ದಿ