ಸುಳ್ಯ : ಕಾರೊಂದು ಮಧ್ಯರಾತ್ರಿ ಭಾರೀ ವೇಗವಾಗಿ ಬಂದು ಉಕ್ಕಿಹರಿಯುವ ಹೊಳೆಗೆ ಬಿದ್ದ ಘಟನೆ ಜು.10 ರಂದು ನಡೆದಿದ್ದು, ಸ್ಥಳೀಯ ಸಿಸಿಟಿವಿಯಲ್ಲಿ ಅವಘಡದ ದೃಶ್ಯ ಸೆರೆಯಾಗಿದೆ.ಮಂಜೇಶ್ವರ -ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಾಣಿಯೂರು ಸಮೀಪದ ಬೈತ್ತಡ್ಕ ಮಸೀದಿಯ ಸಮೀಪದ ಗೌರಿಹೊಳೆಯಲ್ಲಿ ಮಧ್ಯರಾತ್ರಿ 12 ಗಂಟೆ ಸಮಯಕ್ಕೆ ಅವಘಡ ಸಂಭವಿಸಿದೆ. ಕಾರು ಪುತ್ತೂರು ಕಡೆಯಿಂದ ಕಾಣಿಯೂರು ಕಡೆ ಸಂಚರಿಸುತಿತ್ತು.
ಅಪಘಾತದ ವೇಗಕ್ಕೆ ಸೇತುವೆಯ ತಡೆಭೇಲಿಯ ಮೂರು ಕಂಬಗಳು ಮುರಿದಿದ್ದು, ಕಬ್ಬಿಣ ನೇತಾಡುತ್ತಿದೆ. ಬೆಳ್ಳಂಬೆಳಗ್ಗೆ ಅಪಾರ ಜನ ಸೇರಿ ನದಿಯ ಇಕ್ಕೆಲಗಳಲ್ಲಿ ಹುಡುಕಾಟ ನಡೆಸಿದ್ದು,ಇದೀಗ ಕಾರನ್ನು ನದಿಯಿಂದ ಮೇಲೇತ್ತಲಾಗಿದೆ.
ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಘಟನೆಯನ್ನು ದೃಢಪಡಿಸಲಾಗಿದ್ದು, ಅದರಂತೆ ಸ್ಥಳೀಯ ಪೊಲೀಸರು, ಸ್ಥಳೀಯ ಸಾರ್ವಜನಿಕರು, ಅಗ್ನಿಶಾಮಕ ದಳ ಹಾಗೂ ಸವಣೂರಿನ ನಾಲ್ವರು ಡೈವರ್ ಗಳಿಂದ ಶೋಧ ಕಾರ್ಯ ನಡೆದಿದೆ. ಮಧ್ಯಾಹ್ನ ಸುಮಾರು 12 ಗಂಟೆ ಸುಮಾರಿಗೆ ಕಾರನ್ನು ಟ್ರೇಸ್ ಮಾಡಿ 12.30ಕ್ಕೆ ಹೊರ ತೆಗೆಯಲಾಗಿದೆ.
ತನಿಖೆ ವೇಳೆಯಲ್ಲಿ ವೇಳೆ ಕಾರು ಧನುಷ್ ಅವರದ್ದು ಎಂದು ತಿಳಿದುಬಂದಿದೆ. ಕಾರು ಚಾಲಕ ಧನುಷ್, 26 ವರ್ಷ ಪ್ರಾಯ- ಕುಂಡಡ್ಕ, ವಿಟ್ಲ. ಸಹ ಪ್ರಯಾಣಿಕ ಧನುಷ್, 21 ವರ್ಷ ಎಂದು ಗುರುತಿಸಲಾಗಿದೆ. ವಾಹನ ಚಲಾಯಿಸುತ್ತಿದ್ದ ಧನುಷ್ ಅವರ ಸೋದರ ಮಾವನ ಮನೆಯಿಂದ ಇವರು ರಾತ್ರಿ 8 ಗಂಟೆಗೆ ಹೊರಟರು ಎನ್ನಲಾಗಿದೆ.
ಕಾಣೆಯಾದವರು ಇನ್ನೂ ಪತ್ತೆಯಾಗಿಲ್ಲ. ಶೋಧ ಕಾರ್ಯ ಮುಂದುವರೆದಿದೆ.
PublicNext
10/07/2022 01:25 pm