ಉಡುಪಿ: ನಗರದ ಬ್ರಹ್ಮಗಿರಿಯಲ್ಲಿ ಕಾರು ಮತ್ತು ಬೈಕ್ ಮೇಲೆ ಭಾರೀ ಗಾತ್ರದ ಮರ ಉರಳಿ ಬಿದ್ದಿದ್ದು ಕೂದಲೆಳೆಯಲ್ಲಿ ಕಾರು ಮತ್ತು ಬೈಕ್ ಸವಾರರು ಪ್ರಾಣಾಪಾಯದಿಂದ ಪಾರಾದ ಘಟನೆ ಸಂಭವಿಸಿದೆ.
ಬ್ರಹ್ಮಗಿರಿ ಅಂಬಲಪಾಡಿ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಘಟನೆಯಿಂದ ಬೈಕ್ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಸದ್ಯ ಬ್ರಹ್ಮಗಿರಿ ಅಂಬಲಪಾಡಿ ರಸ್ತೆ ಸಂಚಾರ ಸ್ಥಗಿತಗೊಳಿಸಲಾಗಿದ್ದು
ಸ್ಥಳಕ್ಕೆ ಆಗಮಿಸಿರುವ ಟ್ರಾಫಿಕ್ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
PublicNext
09/07/2022 01:27 pm