ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಣಿಪಾಲ : ಪಲ್ಟಿಯಾದ ಕಂಟೇನರ್ ತೆರವು ಕಾರ್ಯಾಚರಣೆ: ಮೂರು ತಾಸು ಸಂಚಾರ ಅಸ್ತವ್ಯಸ್ತ.!

ಪರ್ಕಳ: ಮಣಿಪಾಲ ಸಮೀಪದ ಕೆಳಪರ್ಕಳದ ತಿರುವಿನಲ್ಲಿ ಸೋಮವಾರ ಭಾರಿ ಗಾತ್ರದ ಕಂಟೇನರ್ ನಿಯಂತ್ರಣ ತಪ್ಪಿ ಪಲ್ಟಿಯಾಗಿತ್ತು. ರಾತ್ರಿ ವೇಳೆ ಈ ಘಟನೆ ಸಂಭವಿಸಿದ್ದರಿಂದ ತೆರವು ಕಾರ್ಯ ಆಗಿರಲಿಲ್ಲ. ನಿನ್ನೆ ಮತ್ತು ಇವತ್ತು ಭಾರೀ ಮಳೆ ಕೂಡ ಕಂಟೇನರ್ ತೆರವು ಕಾರ್ಯಕ್ಕೆ ಅಡ್ಡಿಯಾಯಿತು.

ಪರ್ಕಳ ತಿರುವಿನಲ್ಲಿ ಈ ಕಂಟೇನರ್ ಬಿದ್ದಿದ್ದರಿಂದ ಸಂಚಾರಕ್ಕೂ ತೊಡಕಾಗಿತ್ತು. ಆದರೆ ಇದನ್ನು ಕ್ರೇನ್ ಮೂಲಕ ತೆರವುಗೊಳಿಸಲು ಎರಡು ದಿನ ಬೇಕಾಯಿತು. ಕ್ರೇನ್ ಮೂಲಕ ತೆರವುಗೊಳಿಸುವಾಗ ಮೂರು ತಾಸು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ತಸ್ತಗೊಂಡಿತು. ಒಂದೆಡೆ ಮಳೆ, ಮತ್ತೊಂದೆಡೆ ಕೆಸರು ತುಂಬಿದ್ದರಿಂದ ಹರಸಾಹಸದ ಬಳಿಕ‌ ಕಂಟೇನರ್‌ನ್ನು ತೆರವುಗೊಳಿಸಲಾಯಿತು.

Edited By : Shivu K
Kshetra Samachara

Kshetra Samachara

06/07/2022 03:10 pm

Cinque Terre

11.17 K

Cinque Terre

0