ಸುಳ್ಯ : ಫ್ರಿಡ್ಜ್ ನಿಂದ ವಿದ್ಯುತ್ ತಗುಲಿ ಆರು ವರ್ಷದ ಬಾಲಕ ಮೃತಪಟ್ಟಿರುವ ದಾರುಣ ಘಟನೆ ಸುಳ್ಯ ತಾಲೂಕಿನ ಬೆಳ್ಳಾರೆ ಠಾಣಾ ವ್ಯಾಪ್ತಿಯ ಐವರ್ನಾಡಿನಲ್ಲಿ ಶನಿವಾರ ಸಂಭವಿಸಿದೆ.
ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಸನ್ಯಾಸಿಗುಡ್ಡೆ ನಿವಾಸಿ ಹೈದರಾಲಿ ಮತ್ತು ಅಪ್ಸ ಎಂಬವರ ಆರು ವರ್ಷದ ಮಗ ಮಹಮ್ಮದ್ ಅದಿಲ್ ಮೃತ ಬಾಲಕ.
ಆದಿಲ್ ತನ್ನ ತಾಯಿ ಅಪ್ಸ ಅವರ ತವರು ಮನೆ ಬೆಳ್ಳಾರೆಯ ಐವರ್ನಾಡು ಗ್ರಾಮದ ಕೈಯಲ್ ತಡ್ಕಕ್ಕೆ ಬಂದಿದ್ದು, ಮಧ್ಯಾಹ್ನ ಮನೆಯಲ್ಲಿದ್ದ ಹಳೆಯ ಫ್ರಿಡ್ಜ್ ಮುಟ್ಟಿದಾಗ ಕರೆಂಟ್ ಶಾಕ್ ಹೊಡೆದು ಪ್ರಜ್ಞೆ ಕಳೆದುಕೊಂಡು ನೆಲಕ್ಕೆ ಬಿದ್ದಿದ್ದು,ಮಾತನಾಡದ ಸ್ಥಿತಿಯಲ್ಲಿದ್ದ.
ಕೂಡಲೇ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದು,ಈತನನ್ನು ಪರೀಕ್ಷಿಸಿದ ವೈದ್ಯರು ಬಾಲಕ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಬಾಲಕನ ಎಡ ಕೈ ಅಲ್ಲಲ್ಲಿ ಚರ್ಮ ಕಿತ್ತು ಹೋಗಿರುವುದಾಗಿ ಕಂಡುಬಂದಿದೆ. ಬಾಲಕನ ತಂದೆ ನೀಡಿದ ದೂರಿನಂತೆ ಬೆಳ್ಳಾರೆ ಠಾಣೆಯಲ್ಲಿ ಯುಡಿಆರ್ 29/2022ರ ಕಲಂ 174CRPC ಯಂತೆ ಪ್ರಕರಣ ದಾಖಲಾಗಿದೆ.
PublicNext
02/07/2022 11:10 pm