ಕಾಪು: ಕಾರು ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸಾವನ್ನಪ್ಪಿದ ಘಟನೆ ಪಡುಬಿದ್ರಿ ಬಳಿ ನಡೆದಿದೆ.
ಮೃತರನ್ನು ಮುಲ್ಕಿ ಚಿತ್ರಾಪು ನಿವಾಸಿ ರಾಮಚಂದ್ರ ಶೆಟ್ಟಿ (63) ಎಂದು ಗುರುತಿಸಲಾಗಿದೆ. ಇವರು ಇನ್ನಾದ ಸಂಬಂಧಿಗಳ ಮನೆಗೆ ಹೋಗುದಾಗಿ ಸಂಜೆ ಮನೆಯಿಂದ ಹೊರಟಿದ್ದರು. ಪಡುಬಿದ್ರಿಯ ನಾಗರಾಜ್ ಎಸ್ಟೇಟ್ ಬಳಿ ರಸ್ತೆ ದಾಟಲು ನಿಂತಿದ್ದಾಗ ಪಡುಬಿದ್ರಿ ದುರ್ಗಾ ಪ್ರಸಾದ್ ಜ್ಯುವೆಲ್ಲರಿಯ ಮಾಲೀಕ ಮುರುಳಿಧರ್ ಎಂಬವರ ಕಾರು ಡಿಕ್ಕಿ ಹೊಡೆದಿದೆ. ಪಡುಬಿದ್ರಿಯ ಎಸ್‌ಪಿ ಪುರುಷೋತ್ತಮ್ ಸ್ಥಳ ಪರಿಶೀಲನೆ ನಡೆಸಿದ್ದು, ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
24/06/2022 08:56 pm