ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಷ್ಟ್ರೀಯ ಹೆದ್ದಾರಿಯ ಪೆರ್ನೆಯಲ್ಲಿ ದ್ವಿಚಕ್ರವಾಹನಕ್ಕೆ ಟಿಪ್ಪರ್ ಡಿಕ್ಕಿ, ಮಹಿಳೆ ಸಾವು

ಪುತ್ತೂರು: ಮಂಗಳೂರು ಬೆಂಗಳೂರು ರಾಷ್ಡ್ರೀಯ ಹೆದ್ದಾರಿ ಪೆರ್ನೆಯಲ್ಲಿ ಜೂ.18 ರಂದು ಟಿಪ್ಪರ್ ವೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿ ಪುತ್ತೂರು ಹಾರಾಡಿಯಲ್ಲಿರುವ ಪ್ರಜ್ವಲ್ ಸ್ಡೋರ್ಸ್ ನ ಮಾಲಕರ ಪತ್ನಿ ಪೂರ್ಣಿಮಾ ಎ. ಯನ್.(47ವರ್ಷ )ಮೃತಪಟ್ಟ ಘಟನೆ ನಡೆದಿದೆ.

ಪುತ್ತೂರು ಹಾರಾಡಿಯಲ್ಲಿರು ಪ್ರಜ್ವಲ್ ಸ್ಟೋರ್ಸ್ ನ ಮಾಲಕ ನೆಕ್ಕಿಲಾಡಿ ನಿವಾಸಿ ಬಾಲಕೃಷ್ಣ ಭಟ್ ಅವರ ಪತ್ನಿ ಪೂರ್ಣಿಮಾ(47 ವ) ರವರು ಮೃತಪಟ್ಟವರು. ಬಾಲಕೃಷ್ಣ ದಂಪತಿ ಜೂ.18 ರಂದು ಬೆಳಿಗ್ಗೆ ಪೆರ್ನೆಯಲ್ಲಿರು ತಮ್ಮ ತೋಟಕ್ಕೆ ಹೋಗಿದ್ದರು. ಅಲ್ಲಿಂದ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವೇಳೆ ಟಿಪ್ಪರ್ ವೊಂದು ಬಾಲಕೃಷ್ಣ ದಂಪತಿ ಚಲಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಗಂಭೀರ ಗಾಯಗೊಂಡ ಬಾಲಕೃಷ್ಣ ಭಟ್ ಅವರ ಪತ್ನಿ ಪೂರ್ಣಿಮ ಮೃತಪಟ್ಟಿದ್ದಾರೆ.

ಚಿಂತಾಜನಕ ಸ್ಥಿತಿಯಲ್ಲಿದ್ದ ಪೂರ್ಣಿಮರವರನ್ನು ಆಸ್ಪತ್ರೆಗೆ ಸಾಗಿಸಲು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ನೆರವಾದರು.ಅಪಘಾತದ ಬಳಿಕ ಸ್ಥಳದಲ್ಲಿ ಪರಿಸ್ಥಿತಿ ಬಿಗಡಾಯಿಸಿತ್ತು, ಈ ವೇಳೆ ಸ್ಥಳಕ್ಕೆ ಕಡಬ ತಾಲೂಕಿನ ಆಲಂಕಾರು ಕಡೆಗೆ ಗ್ರಾಮ ವಾಸ್ತವ್ಯಕ್ಕೆ ತೆರಳುತ್ತಿದ್ದ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಅವರು ಆಗಮಿಸಿದ್ದು, ವಾಹನದಿಂದ ಇಳಿದು ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲು ವ್ಯವಸ್ಥೆ ಮಾಡಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ ಎನ್ನಲಾಗಿದೆ.

Edited By : Nirmala Aralikatti
Kshetra Samachara

Kshetra Samachara

18/06/2022 08:23 pm

Cinque Terre

11.33 K

Cinque Terre

0