ಕುಂದಾಪುರ: ತೆಕ್ಕಟ್ಟೆಯ ರಾ.ಹೆ. 66ರ ತೆಕ್ಕಟ್ಟೆ ಪ್ರಭು ಕ್ರೀಮ್ ಪಾರ್ಲರ್ ಎದುರು ಮೇ 30ರಂದು ಸ್ಕೂಟಿ ವಾಹನಕ್ಕೆ ಬೈಕ್ ಢಿಕ್ಕಿಯಾದ ಪರಿಣಾಮ ಸ್ಕೂಟಿ ಸವಾರ ಕಂಚುಗಾರುಬೆಟ್ಟು ನಿವಾಸಿ ಗುತ್ತಿಗೆದಾರ ಸುರೇಂದ್ರ ದೇವಾಡಿಗ (41) ಅವರ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಜೂ. 15ರಂದು ಮೃತಪಟ್ಟಿದ್ದಾರೆ.
ಅಪಘಾತದ ಬಳಿಕ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಐದು ದಿನಗಳಲ್ಲೇ ಸುರೇಂದ್ರ ದೇವಾಡಿಗ ಅವರು ಮನೆಗೆ ವಾಪಸಾಗಿದ್ದರು. ಆದರೆ ಜೂ.13 ರಂದು ಏಕಾಏಕಿ ತಲೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಮೆದುಳು ನಿಷ್ಕ್ರಿಯಗೊಂಡಿರುವ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ.ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
16/06/2022 07:24 am