ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: 40 ಅಡಿ ಆಳದ ಕೆರೆಗೆ ಬಿದ್ದು ಯುವಕ ಸಾವು; ಶವ ಮೇಲಕ್ಕೆತ್ತಿದ ಈಶ್ವರ್ ಮಲ್ಪೆ

ಕುಂದಾಪುರ: ಕಾಲು ಜಾರಿ 40 ಅಡಿ ಆಳದ ಕೆರೆಗೆ ಬಿದ್ದು ಸಾವನ್ನಪ್ಪಿದ ಯುವಕನ ಮೃತದೇಹವನ್ನು ಆಪತ್ಬಾಂಧವ ಖ್ಯಾತಿಯ ಈಶ್ವರ್ ಮಲ್ಪೆ ಅವರು ಮೇಲಕ್ಕೆತ್ತಿದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿಯಲ್ಲಿ ನಡೆದಿದೆ.

ಉಮೇಶ್ (35) ಸಾವಿಗೀಡಾದ ಯುವಕ. ಉಮೇಶ್ ಅವರು ಹಾಲಾಡಿಯ ಅಡಿಕೆ ತೋಟದಲ್ಲಿ ನಡೆದುಕೊಂಡು ಹೋಗುತ್ತಿದಾಗ, ತೋಟದ ಮಧ್ಯೆ ಇರುವ ಕೆರೆಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದರು. 40 ಅಡಿ ಆಳವಿದ್ದ ಕೆರೆಯಾದ ಕಾರಣ ಮೃತದೇಹವನ್ನು ಮೇಲಕ್ಕೆತ್ತುವುದು ತುಂಬಾ ಕಷ್ಟವಾಗಿತ್ತು.

ಹೀಗಾಗಿ ಮಲ್ಪೆಯ ಸಮಾಜಸೇವಕ ಆಪತ್ಬಾಂಧವ ಈಶ್ವರ್ ಮಲ್ಪೆ ಅವರಿಗೆ ವಿಷಯ ತಿಳಿಸಿದ್ದು, ಕೂಡಲೇ ಸ್ಥಳಕ್ಕೆ ಧಾವಿಸಿದ ಈಶ್ವರ್, ಹಗ್ಗದ ಸಹಾಯದಿಂದ ಕೆರೆಗೆ ಇಳಿದು, ಸಾಹಸಿಕವಾಗಿ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By :
Kshetra Samachara

Kshetra Samachara

14/06/2022 01:25 pm

Cinque Terre

11.62 K

Cinque Terre

1

ಸಂಬಂಧಿತ ಸುದ್ದಿ