ಹಳೆಯಂಗಡಿ: ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಜಂಕ್ಷನ್ ಬಳಿ ಸ್ಕೂಟರ್ ಗೆ ಟೆಂಪೊ ಡಿಕ್ಕಿಯಾಗಿ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸ್ಕೂಟರ್ ಸವಾರನನ್ನು ಹಳೆಯಂಗಡಿ ಕೊಳುವೈಲು ನಿವಾಸಿ ಬಾಲಕೃಷ್ಣ ಎಂದು ಗುರುತಿಸಲಾಗಿದೆ.
ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಟೆಂಪೋ ಹಳೆಯಂಗಡಿ ಜಂಕ್ಷನ್ ಬರುತ್ತಿದ್ದಂತೆ ಕಿನ್ನಿಗೋಳಿ ಕಡೆಯಿಂದ ಹೆದ್ದಾರಿ ಕ್ರಾಸ್ ಮಾಡಿ ಹಳೆಯಂಗಡಿ ಒಳಪೇಟೆ ಗೆ ಹೋಗುತ್ತಿದ್ದ ಸ್ಕೂಟರ್ ಗೆ ಡಿಕ್ಕಿ ಹೊಡೆದು ಮಾರುದ್ದ ಎಳೆದುಕೊಂಡು ಹೋಗಿದೆ.
ಅಪಘಾತದ ರಭಸಕ್ಕೆ ಸ್ಕೂಟರ್ ಟೆಂಪೋದ ಒಳಗಡೆ ಸಿಲುಕಿಕೊಂಡು ಜಖಂಗೊಂಡಿದ್ದು ಸ್ಕೂಟರ್ ಸವಾರ ಹಳೆಯಂಗಡಿ ಕೊಳುವೈಲು ನಿವಾಸಿ ಬಾಲಕೃಷ್ಣ ಎಂಬವರ ಕಾಲಿಗೆ ಗಂಭೀರ ಗಾಯಗಳಾಗಿ ಮುಕ್ಕ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸ್ಥಳಕ್ಕೆ ಸುರತ್ಕಲ್ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ಸ್ಥಳೀಯರ ಸಹಕಾರದೊಂದಿಗೆ ಟೆಂಪೋ ಒಳಗಡೆ ಸಿಲುಕಿಕೊಂಡ ಸ್ಕೂಟರನ್ನು ಹರಸಾಹಸಪಟ್ಟು ತೆರವುಗೊಳಿಸಲಾಯಿತು.
Kshetra Samachara
13/06/2022 08:45 am