ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಓವರ್ ಟೇಕ್ ಮಾಡಿ ಲಾರಿ ಅಡಿಗೆ ಸಿಲುಕಿ ಬೈಕ್ ಸವಾರ ಸಾವು : ಮತ್ತೊಬ್ಬ ಗಂಭೀರ

ಬೆಳ್ತಂಗಡಿ : ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಬೈಕ್ ಸಾವರನೊಬ್ಬ ಲಾರಿಯನ್ನು ಓವರ್ ಟೇಕ್ ಮಾಡಿದ ಬಳಿಕ ಎದುರಿನಿಂದ ಬಂದ ಇನ್ನೊಂದು ಬೈಕ್ ಗೆ ಡಿಕ್ಕಿ ಹೊಡೆದು ಓವರ್ ಟೇಕ್ ಮಾಡಿದ ಲಾರಿಯ ಚಕ್ರಕ್ಕೆ ಸಿಲುಕಿ ಸ್ಥಳದಲ್ಲಿಯೇ ಸಾವನ್ನಪ್ಪಿ ಮತ್ತೊರ್ವ ಗಂಭೀರವಾಗಿ ಗಾಯಗೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಪೇಟೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಚಾರ್ಮಾಡಿ ಪೇಟೆಯಲ್ಲಿ ಮಂಗಳವಾರ ರಾತ್ರಿ ಯಮಹ ಕಂಪನಿಯ R15 ಬೈಕ್ ಸಾವರ ಮತ್ತು ಸಹಸವಾರ ಕಕ್ಕಿಂಜೆಯಿಂದ ಕೆಲಸ ಮುಗಿಸಿ ಚಾರ್ಮಾಡಿ ಮೇಗಿನ ಪೇಟೆಯಲ್ಲಿರುವ ಮನೆಗೆ ಹೋಗುತ್ತಿದ್ದಾಗ ಚಾರ್ಮಾಡಿ ಪೇಟೆ ಪಾಸ್ ಆಗುವ ವೇಳೆ ಕೆಂಪು ಕಲ್ಲು ಸಾಗಾಟದ ಲಾರಿಯನ್ನು ಓವರ್ ಟೇಕ್ ಮಾಡಿದ ನಂತರ ಎದುರಿನಿಂದ ಬಂದ ಪಲ್ಸರ್ ಬೈಕ್ ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಸವಾರ ಹಿಂದೆ ಓವರ್ ಟೇಕ್ ಮಾಡಿದ ಲಾರಿಯ ಮುಂದಿನ ಬಲಭಾಗದ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಸಹಸವಾರ ಬಲಭಾಗಕ್ಕೆ ಎಸೆಯಲ್ಪಟ್ಟು ಸಣ್ಣಪುಟ್ಟ ಗಾಯದೊಂದಿದೆ ಪರಾಗಿದ್ದಾನೆ , ಪಲ್ಸರ್ ಬೈಕ್ ಸವಾರ ಡಿಕ್ಕಿ ರಭಸಕ್ಕೆ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತಪಟ್ಟ ಸಾವರ ಚಾರ್ಮಾಡಿ ಗ್ರಾಮದ ಮೇಗಿನ ಪೇಟೆ ನಿವಾಸಿ ಇಸ್ಮಾಯಿಲ್ ಅವರ ಮಗ ನಾಝೀರ್(25) ಎಂದು ಗುರುತಿಸಲಾಗಿದೆ. ಕಕ್ಕಿಂಜೆಯಲ್ಲಿ ಕೆಲಸ ಮುಗಿಸಿ ಮನೆಗೆ ಸ್ನೇಹಿತನ ಜೊತೆಗೆ ವಾಪಸ್ ಆಗುವಾಗ ಈ ಘಟನೆ ಸಂಭವಿಸಿದೆ.

ಘಟನೆಯಲ್ಲಿ ಎರಡು ಬೈಕ್ ಸಂಪೂರ್ಣ ಹಾನಿಯಾಗಿದೆ. ಬೆಳ್ತಂಗಡಿ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

08/06/2022 11:58 am

Cinque Terre

7.6 K

Cinque Terre

0

ಸಂಬಂಧಿತ ಸುದ್ದಿ