ಸುರತ್ಕಲ್: ರಾಷ್ಟ್ರೀಯ ಹೆದ್ದಾರಿ 66 ರ ಕುಳಾಯಿ ಲಕ್ಷ್ಮೀ ಟವರ್ಸ್ ಬಳಿ ದನವೊಂದು ರಸ್ತೆ ದಾಟುವ ವೇಳೆಗೆ ವಾಹನವೊಂದು ಡಿಕ್ಕಿ ಹೊಡೆದಿದೆ. ಇದ್ರಿಂದ ದನ ಗಾಯಗೊಂಡು ರಸ್ತೆ ಮಧ್ಯೆ ಬಿದ್ದಿದೆ.
ರಸ್ತೆ ಮಧ್ಯೆ ಬಿದ್ದಿರುವ ದನವನ್ನು ಗಮನಿಸಿದ ಸ್ಥಳೀಯರು ಅದನ್ನು ಪಕ್ಕಕ್ಕೆ ಸರಿಸಿ ಪಶು ವೈದ್ಯರನ್ನು ಕರೆಸಿ ಶುಶ್ರೂಷೆ ನೀಡಿದ್ದಾರೆ. ಬಳಿಕ ದನದ ವಾರಸುದಾರರನ್ನು ಸಂಪರ್ಕಿಸಿ ಅವರಿಗೆ ದನವನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭ ರಮೇಶ್ ಅಳಪೆ,ದೀಪಕ್ ಕುಳಾಯಿ,ಸುನಿಲ್ ಕುಳಾಯಿ,ಪುಷ್ಪರಾಜ್ ಕುಳಾಯಿ,ಸಂತೋಷ್ ಶೆಟ್ಟಿ,ಬಾಬು,ರಾಘವೇಂದ್ರ ಕಾರ್ಕಳ ಮತ್ತು ರಾಕೇಶ್ ಕುಳಾಯಿ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
Kshetra Samachara
06/06/2022 07:26 pm