ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಚಾಲಕನ ನಿಯಂತ್ರಣ ತಪ್ಪಿದ ಕಾರು ಅಪಘಾತ; ತಂದೆ - ಮಗಳು ಸಾವು

ಮಂಗಳೂರು: ನಸುಕಿನ ವೇಳೆ ಚಲಾಯಿಸಿಕೊಂಡು ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ತಂದೆ - ಮಗಳು ಬಲಿಯಾದ ಘಟನೆ ನಗರದ ಹೊರವಲಯದಲ್ಲಿರುವ ಗಂಜಿಮಠದ ಸೂರಲ್ಪಾಡಿಯಲ್ಲಿ ನಡೆದಿದೆ.

ಶಿವಮೊಗ್ಗ ಜಿಲ್ಲೆಯ ರಾಣಿಬೆನ್ನೂರು ನಿವಾಸಿ ಪುಂಡಲೀಕಪ್ಪ(62), ಅವರ ಪುತ್ರಿ ಅಶ್ವಿನಿ(29) ಮೃತಪಟ್ಟ ದುರ್ದೈವಿಗಳು.

ಪುಂಡಲೀಕಪ್ಪನವರು ಅನಾರೋಗ್ಯ ಪೀಡಿತರಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗೆ ಕಾರಿನಲ್ಲಿ ಕರೆತರಲಾಗುತ್ತಿತ್ತು. ಕುಟುಂಬ ಸಮೇತ ಜೂನ್ 2ರಂದು ರಾತ್ರಿ ಹೊರಡಿದ್ದಾರೆ‌. ನಸುಕಿನ ಜಾವ ಕಾರು ಮೂಡುಬಿದಿರೆ ಮೂಲಕ ಮಂಗಳೂರಿಗೆ ಬರುತ್ತಿದ್ದರು. ಈ ವೇಳೆ ಗಂಜಿಮಠ ಸೂರಲ್ಪಾಡಿ ಬಳಿ ಬರುತ್ತಿದ್ದರು. ಈ ವೇಳೆ ಕಾರು ಬೀದಿಬದಿಯಲ್ಲಿ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಅಶ್ವಿನಿಯವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ತೀವ್ರವಾಗಿ ಗಾಯಗೊಂಡ ಪುಂಡಲೀಕ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಉಳಿದಂತೆ ಅಶ್ವಿಯ ಪತಿ ಸಂತೋಷ್, ಪುತ್ರಿ ಶ್ರೇಯಾ, ತಾಯಿ ಪುಷ್ಪಾ ಕಾರು ಚಾಲಕ ಸುಹೈಲ್ ಗಾಯಗೊಂಡಿದ್ದಾರೆ. ನಿದ್ದೆ ಮಂಪರಿನಲ್ಲಿ ಕಾರು ಚಲಾಯಿಸಿಕೊಂಡು ಬಂದಿರೋದೇ ಈ ಅಪಘಾತ ಕಾರಣ ಎಂದು ಹೇಳಲಾಗುತ್ತಿದೆ.

Edited By : Nirmala Aralikatti
Kshetra Samachara

Kshetra Samachara

04/06/2022 02:18 pm

Cinque Terre

11.46 K

Cinque Terre

1

ಸಂಬಂಧಿತ ಸುದ್ದಿ