ಬಂಟ್ವಾಳ : ಕಲ್ಲಡ್ಕದಲ್ಲಿ ಬಾವಿಗೆ ಬಿದ್ದು ವಿವಾಹಿತೆ ಮುನೀಝಾ (20) ಎಂಬವರು ಮೃತಪಟ್ಟ ಘಟನೆ ಇಂದು ನಡೆದಿದೆ.
ಎರಡು ತಿಂಗಳ ಹಿಂದಷ್ಟೇ ಇವರ ವಿವಾಹವಾಗಿತ್ತು. ಫರಂಗಿಪೇಟೆ ಸಮೀಪದ ನಿವಾಸಿಯಾಗಿರುವ ಇವರನ್ನು ಕಲ್ಲಡ್ಕ ನಿವಾಸಿ ಇಬ್ರಾಹಿಂ ಅವರಿಗೆ ವಿವಾಹ ಮಾಡಿಕೊಡಲಾಗಿತ್ತು. ಎಂದಿನಂತೆ ನೀರಿಗಾಗಿ ಬಾವಿ ಕಡೆ ತೆರಳಿದ್ದ ಇವರು ಮನೆಗೆ ಬಾರದೇ ಇದ್ದಾಗ ಬಾವಿಗೆ ಬಿದ್ದದ್ದು ಗೊತ್ತಾಗಿದೆ. ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
29/05/2022 03:26 pm