ಸುರತ್ಕಲ್: ಹಳೆಯಂಗಡಿ ಸಮೀಪದ ಚೇಳ್ಯಾರು ಗ್ರಾಮದ ಖಂಡಿಗೆ ಎಂಬಲ್ಲಿನ ಶ್ರೀಧರ್ಮಅರಸು ಉಳ್ಳಾಯ ದೈವಸ್ಥಾನದ ವಾರ್ಷಿಕ ಜಾತ್ರೆ ಪ್ರಯುಕ್ತ ದೈವಸ್ಥಾನದ ಹಿಂಬದಿ ಗದ್ದೆಯಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಬಂದಿದ್ದ ದೇವು ಯಾನೆ ದೇವದಾಸ್ ಮುಂಚೂರು ಹಾಗೂ ಹರೀಶ ಎಂಬವರು ಅವರವರ ಕೋಳಿಗಳ ಕಾಲಿಗೆ ಬಾಳು(ಹರಿತವಾದ ಸಣ್ಣ ಚೂರಿ ) ನ್ನು ಕಟ್ಟಿ ಕಾದಾಡಲು ನಿರ್ಲಕ್ಷ್ಯತನದಿಂದ ಬಿಟ್ಟ ಪರಿಣಾಮ ಕೋಳಿಯ ಕಾಲಿಗೆ ಕಟ್ಟಿದ್ದ ಬಾಳು ಕೋಳಿ ಅಂಕಕ್ಕೆ ಬಂದಿದ್ದ ಚಂದ್ರಹಾಸ ಎಂಬವರ ಬಲಕಾಲಿನ ಹಿಂಬದಿಯ ಮೊಣಗಂಟಿನ ಕೆಳಗಡೆ ತಿವಿದು ತೀವ್ರ ಗಾಯವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೋಳಿ ಅಂಕ ನಡೆಸಿದ ಪುರಂದರ ಹಾಗೂ ಇತರರು ಅಲ್ಲಿ ಸೇರಿದವರ ಜೀವಕ್ಕೆ ಸುರಕ್ಷತೆಗಾಗಿ ಮುಂಜಾಗ್ರತೆಯ ಬಗ್ಗೆ ತಡೆಬೇಲಿ ನಿರ್ಮಿಸದೆ ಅಸಡ್ಡೆ ವಹಿಸಿದ ಪರಿಣಾಮ ಚಂದ್ರಹಾಸ ಗಂಭೀರ ಗಾಯಗೊಂಡಿದ್ದಾರೆ. ಈ ಬಗ್ಗೆ ಆರೋಪಿಗಳ ವಿರುದ್ಧ ಚಂದ್ರಹಾಸ ದೂರು ನೀಡಿದ್ದು, ಸುರತ್ಕಲ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.
Kshetra Samachara
21/05/2022 10:50 pm