ಉಡುಪಿ: ರಾತ್ರಿ ವೇಳೆ ಭಾರೀ ಮಳೆಯ ವೇಳೆ ಉಡುಪಿಯಿಂದ ಮಣಿಪಾಲಕ್ಕೆ ತೆರಳುತ್ತಿದ್ದ ಖಾಸಗಿ ಆ್ಯಂಬುಲೆನ್ಸ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಕಲಂಕ ಜಂಕ್ಷನ್ ಬಳಿ ನಡೆದಿದೆ.
ಅದೃಷ್ಟವಶಾತ್ ರೋಗಿಗಳು ಯಾರೂ ಇರಲಿಲ್ಲ. ಈ ವೇಳೆ ಚಾಲಕ ಆ್ಯಂಬುಲೆನ್ಸ್ ನಿಲ್ಲಿಸಿದ್ದು ಬೆಂಕಿ ಮತ್ತಷ್ಟು ಆವರಿಸಿದೆ. ಕೂಡಲೇ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸಿದ್ದಾರೆ. ಘಟನೆಯಿಂದಾಗಿ ಕೆಲ ಹೊತ್ತು ಟ್ರಾಫಿಕ್ ದಟ್ಟಣೆ ಉಂಟಾಯಿತು.
Kshetra Samachara
17/05/2022 08:49 am