ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಳ್ಳಾಲ: ಚಾಲಕನ ಧಾವಂತ: ರಾ.ಹೆ 66ರ ಕಾಫಿಕಾಡಲ್ಲಿ ಈರುಳ್ಳಿ ಸಾಗಾಟದ ಹೊಸ ಈಚರ್ ವಾಹನ ಪಲ್ಟಿ

ಉಳ್ಳಾಲ: ಅಜಾಗರೂಕತೆಯ ಚಾಲನೆಯಿಂದ ಈರುಳ್ಳಿ ಸಾಗಿಸುತ್ತಿದ್ದ ಹೊಸ ಈಚರ್ ವಾಹನವು ಪಲ್ಟಿ ಹೊಡೆದ ಘಟನೆ ರಾ.ಹೆ 66ರ ತೊಕ್ಕೊಟ್ಟು, ಕಾಫಿಕಾಡಿನ ರಾಜ್ ಕೇಟರರ್ಸ್ ಬಳಿ ನಡೆದಿದೆ.

ಕಾಫಿಕಾಡು ಹೆದ್ದಾರಿಯಿಂದ ಈರುಳ್ಳಿ ಹೊತ್ತು ಕೇರಳಕ್ಕೆ ಅತೀ ವೇಗದಿಂದ ಸಾಗುತ್ತಿದ್ದ ಮಹಾರಾಷ್ಟ್ರ ನೋಂದಣಿಯ ಹೊಸ ಈಚರ್ ವಾಹನವು ರಸ್ತೆ ಬದಿಯ ಗ್ಯಾರೇಜ್ ಬಳಿ ಉರುಳಿ ಬಿದ್ದಿದೆ. ಘಟನೆಯಲ್ಲಿ ಈಚರ್ ವಾಹನದೊಳಗಿದ್ದ ಮೂವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಣ್ಣ ,ಪುಟ್ಟ ಗಾಯಗಳಾಗಿರುವ ಅವರನ್ನು ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈಚರ್ ವಾಹನ ಚಾಲಕನ ಅತೀ ವೇಗ ಮತ್ತು ಅಜಾಗರೂಕತೆಯ ಚಾಲನೆಯೇ ಅಪಘಾತಕ್ಕೆ ಕಾರಣವೆಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಕೆಳ ತಿಂಗಳ ಹಿಂದಷ್ಟೇ ಇದೇ ಪ್ರದೇಶದಲ್ಲಿ ಹೆದ್ದಾರಿಯಲ್ಲಿ ಅಜಾಗರೂಕತೆಯಿಂದ ಚಲಿಸುತ್ತಿದ್ದ ಕಾರು ಚಾಲಕನನ್ನ ಬದುಕಿಸಲು ಹೋಗಿ ಶೋರೂಂಗೆ ಕಾರುಗಳನ್ನ ಸಾಗಿಸುತ್ತಿದ್ದ ಬೃಹತ್ ಕಂಟೇನರ್ ಲಾರಿಯೊಂದು ಉರುಳಿ ಕಮರಿಗೆ ಬಿದ್ದಿತ್ತು.

Edited By : Manjunath H D
Kshetra Samachara

Kshetra Samachara

13/05/2022 05:40 pm

Cinque Terre

15.07 K

Cinque Terre

0

ಸಂಬಂಧಿತ ಸುದ್ದಿ