ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ನಗರದ ಇಂದ್ರಾಳಿಯ ಮನೆಯಲ್ಲಿ ಬೆಂಕಿ ಆಕಸ್ಮಿಕ: 50 ಸಾವಿರ ರೂ ನಷ್ಟ

ಉಡುಪಿ: ನಗರದ ಇಂದ್ರಾಳಿ ಬಳಿಯ ಬುಡ್ನಾರ್‌ನ ಮನೆಯೊಂದರಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದೆ. ಬೆಳಗಿನ ಜಾವ 2 ಗಂಟೆ ಸುಮಾರಿಗೆ ಬೆಂಕಿ ಆಕಸ್ಮಿಕ ಸಂಭವಿಸಿದ್ದು ತಕ್ಷಣ ಅಗ್ನಿ ಶಾಮಕ‌ ದಳದವರಿಗೆ ಸುದ್ದಿ ಮುಟ್ಟಿಸಲಾಯಿತು. ಸುಮಾರು ಎರಡು ತಾಸು ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅನ್ಸಾರ್ ಅಹಮದ್ ಸಹಿತ ಸ್ಥಳೀಯರು ಕಾರ್ಯಾಚರಣೆಗೆ ಸಹಕರಿಸಿದರು. ಇಲ್ಲಿನ ಮತ್ತಾಕ್ ಆಲಿ ಎಂಬುವರ ಮನೆ ಇದಾಗಿದ್ದು, ಅಗ್ನಿ ಅವಘಡದಿಂದ ಅಂದಾಜು 50 ಸಾವಿರ ರೂ. ನಷ್ಟ ಸಂಭವಿಸಿದೆ ಎನ್ನಲಾಗಿದೆ.

Edited By : Shivu K
Kshetra Samachara

Kshetra Samachara

11/05/2022 09:18 am

Cinque Terre

13.32 K

Cinque Terre

0

ಸಂಬಂಧಿತ ಸುದ್ದಿ