ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಟ್ಲ: ಅಂಗಡಿ, ಬೇಕರಿ, ಬಸ್ ತಂಗುದಾಣಕ್ಕೆ ಡಿಕ್ಕಿ ಹೊಡೆದು ಹೋಟೆಲ್ ನುಗ್ಗಿದ ಟೋಯಿಂಗ್ ಲಾರಿ: ಚಾಲಕ ಗಂಭೀರ

ವಿಟ್ಲ: ಟೋಯಿಂಗ್ ಲಾರಿಯೊಂದು ಬಸ್ ತಂಗುದಾಣ, ಅಂಗಡಿಗಳಿಗೆ ಡಿಕ್ಕಿ ಹೊಡೆದು ಬಳಿಕ ಹೋಟೆಲ್ ಗೆ ನುಗ್ಗಿದ ಪರಿಣಾಮ ಚಾಲಕ ಗಂಭೀರ ಗಾಯಗೊಂಡ ಘಟನೆ ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಕೊಡಾಜೆ ಎಂಬಲ್ಲಿ ಸಂಭವಿಸಿದೆ.

ಪುತ್ತೂರು ಕಡೆಯಿಂದ ಮಂಗಳೂರಿಗೆ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ಕಳೆದು ಕೊಡಾಜೆ ಜಂಕ್ಷನ್ ನಲ್ಲಿ ನಂದಿನಿ ಹಾಲಿನ ಅಂಗಡಿ, ಬೇಕರಿ, ಬಸ್ ತಂಗುದಾಣ, ಮೊಬೈಲ್ ಅಂಗಡಿ ಮಹಡಿಗೆ, ಡಿಕ್ಕಿ ಹೊಡೆದು ಹೋಟೆಲ್‌ಗೆ ನುಗ್ಗಿದೆ. ಘಟನೆಯಿಂದ ಚಾಲಕ ಗಂಭೀರ ಗಾಯಗೊಂಡಿದ್ದು, ತಕ್ಷಣವೇ ಆತನನ್ನು ಮಂಗಳೂರು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಶಿರಸಿ ಮೂಲದ ಲಾರಿ ಎಂದು ತಿಳಿದು ಬಂದಿದೆ‌. ಹಗಲು ವೇಳೆ ಇಲ್ಲಿ ಹೆಚ್ಚಿನ ಜನ ಸಂದಣಿ ಕಾಣುತ್ತಿದ್ದು, ರಾತ್ರಿ 1 ಗಂಟೆ ಅಂದಾಜಿಗೆ ಈ ಘಟನೆ ಸಂಭವಿಸಿದ್ದರಿಂದ ಸಂಭವಿಸಬಹುದಾದ ಭಾರೀ ಅನಾಹುತ ತಪ್ಪಿದೆ. ಘಟನೆಯಿಂದ ಅಂಗಡಿಗಳಿಗೆ ಭಾರೀ ಹಾನಿ ಸಂಭವಿಸಿದೆ.

Edited By : Nagaraj Tulugeri
Kshetra Samachara

Kshetra Samachara

06/05/2022 09:22 am

Cinque Terre

8.73 K

Cinque Terre

0

ಸಂಬಂಧಿತ ಸುದ್ದಿ