ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ವಿಜಯ ಸನ್ನಿಧಿ ಬಳಿ ಅಡ್ಡ ಬಂದ ಪಾದಚಾರಿಯೊಬ್ಬರನ್ನು ಬಚಾವ್ ಆಗಿಸಲು ಯತ್ನಿಸಿದಾಗ ಆಟೋರಿಕ್ಷಾ ಪಲ್ಟಿಯಾಗಿ ಪಾದಚಾರಿ ಸಹಿತ ನಾಲ್ವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗಾಯಗೊಂಡವರನ್ನು ಮುಲ್ಕಿ ಸಮೀಪದ ಮಿಷನ್ ಕಂಪೌಂಡ್ ಬಳಿಯ ನಿವಾಸಿ ಭಾಸ್ಕರ ಶೆಟ್ಟಿ, ಆಟೋ ಚಾಲಕ ಕೋಲ್ನಾಡ್ ನಿವಾಸಿ ಇಬ್ರಾಹಿಂ ಹಾಗೂ ಆಟೋದಲ್ಲಿದ್ದ ಪ್ರಯಾಣಿಕರಾದ ಕಾಪು ಫಕೀರನ ಕಟ್ಟೆ ನಿವಾಸಿಗಳಾದ ತಸ್ಲೀಂ, ಅವ್ವಮ್ಮ, ಅನ್ವರ್, ಸರ್ಫರಾಜ್, ಸಾಜ್, ಆಸಿಯಾ ಎಂದು ಗುರುತಿಸಲಾಗಿದೆ. ಕೆಲವರಿಗೆ ಚಿಕ್ಕಪುಟ್ಟ ಗಾಯವಾಗಿದೆ.
ರಾಷ್ಟ್ರೀಯ ಹೆದ್ದಾರಿ ಕೊಲ್ನಾಡು ಕಡೆಯಿಂದ ಬರುತ್ತಿದ್ದ ಆಟೋಗೆ ಮುಲ್ಕಿ ವಿಜಯ ಸನ್ನಿಧಿ ಬಳಿ ಏಕಾಏಕಿ ಹೆದ್ದಾರಿ ಕ್ರಾಸ್ ಮಾಡುತ್ತಿದ್ದ ಪಾದಚಾರಿ ಭಾಸ್ಕರ್ ಶೆಟ್ಟಿ ಎಂಬವರು ಅಡ್ಡ ಬಂದಿದ್ದು, ಆಗ ಅಪಘಾತ ತಪ್ಪಿಸಲು ಯತ್ನಿಸಿದಾಗ ಆಟೋ ಪಲ್ಟಿಯಾಗಿದೆ.
ಈ ಸಂದರ್ಭ ಆಟೋದಲ್ಲಿದ್ದ ಪ್ರಯಾಣಿಕರು ಸಿಲುಕಿಕೊಂಡು ಒದ್ದಾಡುತ್ತಿರುವಾಗ ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅಪಘಾತ ನಡೆದ ತಕ್ಷಣ ಆಂಬ್ಯುಲೆನ್ಸ್ ಗೆ ಸ್ಥಳೀಯರು ಕರೆ ಮಾಡಿದರೂ ಯಾರೂ ಬಾರದೆ ಗಾಯಾಳುಗಳು ಹಾಗೂ ಸ್ಥಳೀಯರು ಪರದಾಡಬೇಕಾಯಿತು. ಅಪಘಾತದಿಂದ ಕೆಲಹೊತ್ತು ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಕೂಡಲೇ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಧಾವಿಸಿ ಸಂಚಾರ ಸುಗಮಗೊಳಿಸಿದರು.
Kshetra Samachara
04/05/2022 09:05 pm