ಕಾಸರಗೋಡು: ನಿಯಂತ್ರಣ ತಪ್ಪಿದ ಕಾರೊಂದು ಬಾವಿಗೆ ಬಿದ್ದ ಘಟನೆ ಬೇಕಲ ಸಮೀಪದ ಪೂಚಕ್ಕಾಡ್ ಬಳಿ ಇಂದು ಸಂಜೆ ನಡೆದಿದೆ.
ಇನ್ನು ಕಾರು ಬಾವಿಗೆ ಬಿದ್ದರು ಕಾರಲ್ಲಿದ್ದ ನಾಲ್ವರು ಪವಾಡ ಸದೃಶ ವಾಗಿ ಪಾರಾಗಿದ್ದಾರೆ . ಬಾವಿಯಲ್ಲಿ ಸಿಲುಕಿದ್ದ ನಾಲ್ವರನ್ನು ಪರಿಸರವಾಸಿಗಳು ಹಾಗೂ ಅಗ್ನಿಶಾಮಕ ದಳದ ಸಿಬಂದಿಗಳು ಮೇಲಕ್ಕೆತ್ತಿದ್ದಾರೆ.
ಅತೀ ವೇಗದಿಂದ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಬಾವಿಗೆ ಬಿದ್ದಿದೆ. ಇದನ್ನು ಗಮನಿಸಿದ ಪರಿಸರವಾಸಿಗಳು ಕೂಡಲೇ ಕಾರ್ಯಾಚರಣೆ ನಡೆಸಿ, ಮೂವರನ್ನು ಪರಿಸರದ ಯುವಕರು ಕಾರಿನಿಂದ ಹೊರತೆಗೆದು ಮೇಲಕ್ಕೆತ್ತಿದ್ದಾರೆ.
ಇನ್ನು ಮತ್ತೊಬ್ಬರನ್ನು ಅಗ್ನಿಶಾಮಕ ದಳದ ಸಿಬಂದಿ ರಕ್ಷಿಸಿದ್ದಾರೆ. ಬಾವಿಗೆ ಬಿದ್ದ ಕಾರು ಅರ್ಧ ಮುಳುಗಿದ ಸ್ಥಿತಿಯಲ್ಲಿತ್ತು ಈ ವೇಳೆ ಕಾರಿನ ಗಾಜು ಹಾಗೂ ಬಾಗಿಲು ಒಡೆದು ನಾಲ್ವರನ್ನು ಹೊರೆತೆಗೆದು ರಕ್ಷಿಸಲಾಗಿದೆ. ಕಾರಲ್ಲಿದ್ದವರು ಉದುಮ ನಿವಾಸಿಗಳೆಂದು ತಿಳಿದು ಬಂದಿದೆ. ಬಳಿಕ ಕ್ರೇನ್ ಬಳಸಿ ಕಾರನ್ನು ಬಾವಿಯಿಂದ ಹೊರತೆಗೆಯಲಾಗಿದೆ.
PublicNext
03/05/2022 11:06 pm